×
Ad

ಹಿದಾಯ ಫೌಂಡೇಶನ್ ವತಿಯಿಂದ ʼಉನ್ನತಿ - 2026ʼ ಶೈಕ್ಷಣಿಕ ಕಾರ್ಯಕ್ರಮ

Update: 2026-01-28 20:50 IST

ಮಂಗಳೂರು : ಸರಕಾರಿ ಶಾಲೆಯನ್ನು ನೆಚ್ಚಿಕೊಂಡಿರುವ ಬಡ, ದುರ್ಬಲ ಕುಟುಂಬಗಳ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ ಅವರು ದೇಶದ ಮುಂಚೂಣಿಯ ಸ್ಥಾನಗಳಿಗೆ ಆಯ್ಕೆಯಾಗುವಂತೆ ಮಾಡುವುದು ಪರಮಶ್ರೇಷ್ಠ ಕರ್ತವ್ಯ ಎಂದು ಶಾಲಾ ಶಿಕ್ಷಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕ ಶಶಿಧರ್ ಹೇಳಿದರು.

ಅವರು ಮಂಗಳೂರಿನ ಹಿದಾಯ ಫೌಂಡೇಶನ್ ವತಿಯಿಂದ ಸಂಸ್ಥೆಯ ಸಭಾಂಗಣ ಎಪಿಸೆಂಟರ್ ನಲ್ಲಿ ಆಯೋಜಿಸಲಾದ ಎಸ್ ಎಸ್ ಎಲ್ ಸಿ ಫಲಿತಾಂಶ ಉನ್ನತೀಕರಣ ಯೋಜನೆಯ ಉಪಕ್ರಮಗಳ ಅವಲೋಕನ ಕಾರ್ಯಕ್ರಮ ಉನ್ನತಿ - 2026ರಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಸರಕಾರಿ ಶಾಲೆಗಳು ದುರ್ಬಲಗೊಂಡರೆ ಅದರ ನೇರ ಪರಿಣಾಮ ತಳಸಮುದಾಯದ ಮೇಲೆ ಬೀರಲಿದೆ ಆದುದರಿಂದ ಸಂವಿಧಾನದ ಆಶಯದಂತೆ ಪ್ರತಿ ಮಗುವೂ ಶೈಕ್ಷಣಿಕ ಸಬಲೀಕರಣಗೊಳ್ಳಲು ಸರಕಾರಿ ಶಾಲೆ ಗಳನ್ನು ಪೋಷಿಸಬೇಕಾದುದು ಸರಕಾರದ ಜೊತೆ ಸಮಾಜದ ಕರ್ತವ್ಯವೂ ಹೌದು, ಈ ನಿಟ್ಟಿನಲ್ಲಿ ಹಿದಾಯ ಫೌಂಡೇಶನ್ ಸರಕಾರಿ ಶಾಲೆಗಳಿಗೆ ನೀಡುತ್ತಿರುವ ಬೆಂಬಲ ಮತ್ತು ನೆರವು ಅಮೋಘವಾದುದು ಎಂದು ಅವರು ಹೇಳಿದರು.

ಸಂಸ್ಥೆಯು ಜಿಲ್ಲೆಯ ಹತ್ತು ಶಾಲೆಗಳಿಗೆ ಗೌರವ ಶಿಕ್ಷಕಿಯರನ್ನು ನೀಡಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕ್ಷಣದ ಅಡಿಪಾಯ ಗಟ್ಟಿ ಮಾಡಿ ಎಸ್ ಎಸ್ ಎಪ್ ಸಿ ಫಲಿತಾಂಶ ಉನ್ನತೀಕರಣಗೊಳ್ಳಲು ಕೆಲವು ವರ್ಷಗಳಿಂದ‌ ಉಪಕ್ರಮಗಳನ್ನು ಜಾರಿ ಮಾಡಿತ್ತು.

ಈ ಶಾಲೆಗಳ ಮುಖ್ಯಶಿಕ್ಷಕರು ಮತ್ತು ಸಂಸ್ಥೆ ಪ್ರಾಯೋಜಿಸಿದ ಸುಮಾರು 25 ಗೌರವ ಶಿಕ್ಷಕಿಯರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು. ಸಂಸ್ಥೆಯ ಕಾರ್ಯಾಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಅಬ್ಬಾಸ್ ಉಚ್ಚಿಲ್ , ಆಡಳಿತಾಧಿಕಾರಿ ಆಬಿದ್ ಅಸ್ಗರ್, ಶೈಕ್ಷಣಿಕ ಯೋಜನೆಯ ಉಸ್ತುವಾರಿ ಅಬ್ದುಲ್ ರಝಾಕ್ ಅನಂತಾಡಿ, ಹಿದಾಯ ವಿಶೇಷ ಶಾಲೆಯ ಉಸ್ತುವಾರಿ ಮೊಹಮ್ಮದ್ ತುಂಬೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸದಸ್ಯರಾದ ಮಕ್ಬೂಲ್ ಅಹಮದ್, ಆಸೀಫ್ ಇಕ್ಬಾಲ್, ಹಕೀಂ ಕಲಾಯಿ, ಕೆ.ಎಸ್ ಅಬೂಬಕ್ಕರ್, ಶಕೂರ್ ಹಾಜಿ‌ ಪುತ್ತೂರು, ಶರೀಫ್ ಮುಕ್ರಂಪಾಡಿ ,ಇದ್ದಿನ್ ಕುಂಞಿ ಮಂಗಳೂರು, ಇಬ್ರಾಹಿಂ ಖಲೀಲ್, ಇಫ್ತಿಕಾರ್ ಅಹಮದ್, ಪಿ.ಮೊಹಮ್ಮದ್, ಆಶಿಕ್ ಕುಕ್ಕಾಜೆ, ರಶೀದ್ ಕಕ್ಕಿಂಜೆ, ಇಲ್ಯಾಸ್ ಕಕ್ಕಿಂಜೆ, ಜಬ್ಬಾರ್ ಬೆಂಗರೆ, ಸಿ.ಎಚ್ ಮೊಹಿದಿನ್ ಭಾಗವಹಿಸಿದ್ದರು.

ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ಎಂ.ತುಂಬೆ ಸ್ವಾಗತಿಸಿದರು. ಅಬ್ದುಲ್ ಹಕೀಂ ಕಲಾಯಿ ಧನ್ಯವಾದಗೈದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News