ಮೇ 1ರಿಂದ ಕುಂಡದಬೆಟ್ಟು ಉರೂಸ್ ಕಾರ್ಯಕ್ರಮ
ಬೆಳ್ತಂಗಡಿ: ಮುಹಿಯುದ್ದೀನ್ ಜುಮಾ ಮಸ್ಜಿದ್ ಕುಂಡದಬೆಟ್ಟು ಇಲ್ಲಿ ಆಚರಿಸಿಕೊಂಡು ಬರುತ್ತಿರುವ 51ನೇ ವರ್ಷದ ಮಖಾಂ ಉರೂಸ್ ಕಾರ್ಯಕ್ರಮ ಮೇ 1 ರಿಂದ 3ರತನಕ ದರ್ಗಾ ವಠಾರದಲ್ಲಿ ನಡೆಯಲಿದೆ ಎಂದು ಮಸ್ಜಿದ್ ಅಧ್ಯಕ್ಷ ಮುತ್ತಲಿಬ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ಮೇ 1 ರಂದು ಧ್ವಜಾರೋಹಣವನ್ನು ಮಸೀದಿ ಅಧ್ಯಕ್ಷ ಮುತ್ತಲಿಬ್ ಮಾಡಲಿದ್ದು, ರಾತ್ರಿ ಗಂಟೆ 7.30 ಕ್ಕೆ ಮಸ್ ಊದ್ ಸಅದಿ ಗಂಡಿಬಾಗಿಲು ನೇತೃತ್ವದಲ್ಲಿ ಜಲಾಲಿಯ ಝಿಕ್ರ್ ಮಜ್ಲಿಸ್ ನಡೆಯಲಿದೆ. ಕುಂಡದಬೆಟ್ಟು ಖತೀಬ ಕೆ.ಎಂ. ಹನೀಪ್ ಸಖಾಫಿ ಪ್ರಭಾಷಣ ಮಾಡಲಿದ್ದಾರೆ.
'ಮೇ 2 ರಂದು ರಾತ್ರಿ 7.30 ಕ್ಕೆ ಧಾರ್ಮಿಕ ಪ್ರವಚನ ನಡೆಯಲಿದ್ದು, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಸುನ್ನೀ ಜಂಇಯ್ಯತುಲ್ ಉಲಾಮ ಕೋಶಾಧಿಕಾರಿ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದತ್ ತಂಙಳ್ ಆಶೀರ್ವಚನ, ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಮೇ 3 ರಂದು ರಾತ್ರಿ 7 ಗಂಟೆಗೆ ಬೆಂಗಳೂರಿನ ಎನ್.ಕೆ.ಎಂ. ಶಾಫಿ ಸಅದಿ, ಶ್ರೀ ಕ್ಷೇತ್ರ ಕೇಮಾರುವಿನ ಈಶವಿಠಲದಾಸ ಸ್ವಾಮೀಜಿ, ಕುಂಡದಬೆಟ್ಟು ಸೇಂಟ್ ಜಾನ್ ಪಾಲ್ ಸೆಕೆಂಡ್ ಚರ್ಚ್ ನ ಧರ್ಮಗುರು ಫಾ. ಜೋಸೆಫ್ ವಲಿಯಪರಂಬಿಲ್ ಉಪಸ್ಥಿತಿಯಲ್ಲಿ ಸೌಹಾರ್ದ ಭಾವೈಕ್ಯತಾ ಸಂಗಮ ನಡೆಯಲಿದ್ದು, ಅತಿಥಿಗಳಾಗಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕೆ. ಹೆಚ್. ಇಬ್ರಾಹಿಂ ಮದನಿ ಕಲ್ಲಟ್ಟ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಅಬ್ದುಲ್ ಖಾದರ್ ತುಂಬೆ, ನಿತೀಶ್ ಕೋಟ್ಯಾನ್ ವೇಣೂರು, ಶೇಖರ್ ಕುಕ್ಕೇಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ ಮುಂತಾದವರು ಭಾಗವಹಿಸಲಿದ್ದಾರೆ.
'ರಾತ್ರಿ 9.30 ಕ್ಕೆ ಉರೂಸ್ ಸಮಾರೋಪ ನಡೆಯಲಿದ್ದು ಅಸ್ಸಯ್ಯಿದ್ ಝೈನಲ್ ಆಬಿದೀನ್ ಜಮಲುಲೈಲಿ ತಂಙಳ್, ಕಾಜೂರು ಇವರು ದುಆಶೀರ್ವಚನ ಹಾಗೂ ಪ್ರಭಾಷಣ ಮಾಡಲಿದ್ದಾರೆ. ಉರೂಸ್ ಕಾರ್ಯಕ್ರಮದ ಎಲ್ಲಾ ದಿನಗಳಲ್ಲೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ' ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಸೀದಿ ಧರ್ಮಗುರು ಕೆ.ಎಂ.ಹನೀಪ್ ಸಖಾಫಿ, ಮಸೀದಿಯ ಪ್ರಧಾನ ಕಾರ್ಯದರ್ಶಿ ಕೆ.ವೈ.ಇಸ್ಮಾಯಿಲ್ ಇದ್ದರು.