ಕಿನ್ಯ: ಮಾ.10ರಂದು ಮಜ್ಲಿಸುನ್ನೂರು, ಅಹ್ಲನ್ ರಮಝಾನ್ ಕಾರ್ಯಕ್ರಮ
Update: 2024-03-09 15:22 IST
ಉಳ್ಳಾಲ, ಮಾ.9: ಕಿನ್ಯದ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಆಶ್ರಯದಲ್ಲಿ ಪ್ರತೀ ತಿಂಗಳು ಜರುಗುವ ಮಜ್ಲಿಸುನ್ನೂರು ಇದರ 12ನೇ ವಾರ್ಷಿಕೋತ್ಸವ ಹಾಗೂ ಅಹ್ಲನ್ ರಮಝಾನ್ ಕಾರ್ಯಕ್ರಮ ಮಾ.10ರಂದು ಮಗ್ರಿಬ್ ನಮಾಝ್ ಬಳಿಕ ಕಿನ್ಯದ ಸಿ.ಎಚ್. ನಗರದಲ್ಲಿ ನಡೆಯಲಿದೆ. ಮಜ್ಲಿಸುನ್ನೂರು ಕೇಂದ್ರ ಸಮಿತಿಯ ಜನರಲ್ ಕನ್ವೀನರ್ ಹಸನ್ ಸಖಾಫಿ ಪೋಕೊಟುರ್ ನೇತೃತ್ವ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.