ಸಮಸ್ತ- 100ನೇ ವಾರ್ಷಿಕ ಅಂತಾರಾಷ್ಟ್ರೀಯ ಮಹಾಸಮ್ಮೇಳನ: ದ.ಕ. ಜಿಲ್ಲಾ ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ
ಮಂಗಳೂರು: ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ 100 ವರ್ಷಗಳನ್ನು ಪೂರೈಸುತ್ತಿದ್ದು, ನೂರನೇ ವಾರ್ಷಿಕ ಅಂತಾರಾಷ್ಟ್ರೀಯ ಮಹಾ ಸಮ್ಮೇಳನ-2026ರ ಫೆಬ್ರವರಿ 4, 5, 6, 7, 8ರಂದು ಕಾಸರಗೋಡು ಕುಣಿಯಾ ಎಂಬಲ್ಲಿ ನಡೆಯಲಿದೆ. ಇದರ ಪ್ರಚಾರಾರ್ಥವಾಗಿ ದ.ಕ. ಜಿಲ್ಲಾ ಸ್ವಾಗತ ಸಮಿತಿಯ ಕಚೇರಿಯು ಮಂಗಳೂರು ಬಂದರ್ ಸಮಸ್ತಾಲಯದಲ್ಲಿ ಉದ್ಘಾಟನೆಗೊಂಡಿತು.
ಮುಶಾವರ ಪ್ರಧಾನ ಕಾರ್ಯದರ್ಶಿ ಶೈಖುನಾ ಬಿ.ಕೆ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಕಚೇರಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಮಸ್ತ ನೂರನೇ ವಾರ್ಷಿಕವನ್ನು ಎಲ್ಲಾ ರೀತಿಯಲ್ಲೂ ವಿಜಯಗೊಳಿಸಲು ಕಾರ್ಯಕರ್ತರು ಸಕ್ರಿಯರಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಸ್ತ ಕರ್ನಾಟಕ ಮುಶಾವರದ ಕಾರ್ಯಾಧ್ಯಕ್ಷ ಶೈಖುನಾ ತೋಡಾರು ಉಸ್ಮಾನುಲ್ ಫೈಝಿ ವಹಿಸಿದ್ದರು. ಹಿರಿಯ ವಿದ್ವಾಂಸ ಇಸ್ಮಾಯೀಲ್ ಫೈಝಿ ಸೂರಿಂಜೆ ದುಆಗೈದರು.
ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಮೌಲಾನ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಅಶ್ರಫ್ ಫೈಝಿ ಕೊಡಗು, ಕೆ.ಬಿ.ದಾರಿಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಸದಸ್ಯರಾದ ಕೆ.ಎಸ್. ಇಸ್ಮಾಯೀಲ್ ಹಾಜಿ ಕಲ್ಲಡ್ಕ, ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಎಂ.ಎಚ್.ಮುಹಿಯುದ್ದೀನ್ ಹಾಜಿ, ಕಾರ್ಯದರ್ಶಿ ರಫೀಕ್ ಹಾಜಿ, ಎಸ್ಕೆಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಅಮೀರ್ ತಂಙಳ್ ಕಿನ್ಯ, ವಿಖಾಯ ಪ್ರಮುಖರಾದ ಇಸ್ಮಾಯೀಲ್ ತಂಙಳ್ ಉಪ್ಪಿನಂಗಡಿ, ಕೇಂದ್ರ ಮಸೀದಿಯ ಖತೀಬ್ ಸೈಯದ್ ಬಾಸಿತ್ ತಂಙಳ್ ಕುಕ್ಕಾಜೆ, ಅಕ್ರಮಲಿ ತಂಙಳ್ ಅಂಗರಕರಿಯ, ಮುಶಾವರ ಸದಸ್ಯರಾದ ಕೆ.ಪಿ.ಶರೀಫ್ ಫೈಝಿ ಕಡಬ, ಇಬ್ರಾಹೀಂ ದಾರಿಮಿ ಕಡಬ, ಆದಂ ದಾರಿಮಿ ಅಜ್ಜಿಕಟ್ಟೆ, ಎಸ್.ಬಿ. ಉಸ್ಮಾನ್ ದಾರಿಮಿ, ಮೂಸಾ ದಾರಿಮಿ ಕಕ್ಕಿಂಜೆ, ಅಬ್ದುರ್ರಹ್ಮಾನ್ ಫೈಝಿ ಪಲಿಮಾರ್, ತೋಡಾರ್ ದಾರಿಮಿ, ಅಹ್ಮದ್ ದಾರಿಮಿ ಕಂಬಳಬೆಟ್ಟು, ಉಮರ್ ಫೈಝಿ ಸಾಲ್ಮರ, ಹಮೀದ್ ದಾರಿಮಿ ಪೆರ್ನೆ, ಪ್ರಮುಖರಾದ ಶಂಸುದ್ದೀನ್ ದಾರಿಮಿ ಪರ್ಪುಂಜ, ಅಬೂ ಸ್ವಾಲಿಹ್ ಫೈಝಿ, ರಫೀಕ್ ಫೈಝಿ ಕನ್ಯಾನ, ಮುಸ್ತಫ ಅನ್ಸಾರಿ, ಇಸ್ಮಾಯೀಲ್ ಯಮಾನಿ, ಹಸನಬ್ಬ ಫರಂಗಿಪೇಟೆ, ಕೂಟತ್ತಾನ ಹಾಜಿ, ರಿಯಾಝ್ ಹಾಜಿ ಬಂದರ್ ಹಾಗೂ ಸಮಸ್ತ ಮತ್ತು ಪೋಷಕ ಘಟಕಗಳ ಪ್ರಮುಖ ನಾಯಕರು ಉಪಸ್ಥಿತರಿದ್ದರು.
ಪ್ರಚಾರ ಸಮಿತಿತ ಕೋ ಆರ್ಡಿನೇಟರ್ ಖಾಸಿಂ ದಾರಿಮಿ ಸ್ವಾಗತಿಸಿದರು. ಕೆ.ಐ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ವಂದಿಸಿದರು.