×
Ad

ಕಡಬ ಪಟ್ಟಣ ಪಂಚಾಯತ್ ಚುನಾವಣೆ: 11 ಗಂಟೆ ವೇಳೆ ಶೇ. 35.61 ಮತದಾನ

Update: 2025-08-17 11:43 IST

ಕಡಬ, ಆ.17: ಇದೇ ಮೊದಲ ಬಾರಿಗೆ ಕಡಬ ಪಟ್ಟಣ ಪಂಚಾಯತ್ ಗೆ ಚುನಾವಣೆಯು ನಡೆಯುತ್ತಿದ್ದು, ಬೆಳಗ್ಗೆ 7ರಿಂದ ಮತದಾನ ಆರಂಭಗೊಂಡಿದೆ.

ಪೂರ್ವಾಹ್ನ 11 ಗಂಟೆಯ ವೇಳೆ ಶೇ.35 ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

 

ಕಡಬ ಪಟ್ಟಣ ಪಂಚಾಯತ್ ನಲ್ಲಿ 13 ವಾರ್ಡ್ ಗಳಿದ್ದು, ಚುನಾವಣಾ ಕಣದಲ್ಲಿ ಒಟ್ಟು 32 ಅಭ್ಯರ್ಥಿಗಳಿದ್ದಾರೆ. ಒಟ್ಟು 8,334 ಅರ್ಹ ಮತದಾರರಿದ್ದು, ಈ ಪೈಕಿ 4,018 ಪುರುಷ ಹಾಗೂ 4,316 ಮಹಿಳಾ ಮತದಾರರಾಗಿದ್ದಾರೆ.

ವಾರ್ಡ್ ವಾರು ಶೇ. ಮತದಾನ(11 ಗಂಟೆ ವೇಳೆ) :

ಕಳಾರ ಶೇ.32.47, ಕೋಡಿಬೈಲು ಶೇ. 36.46, ಪನ್ಯ 42.86, ಬೆದ್ರಾಜೆ 45.36, ಮಾಲೇಶ್ವರ 32.65, ಕಡಬ 34.54, ಪಣೆಮಜಲು 39.95, ಪಿಜಕಳ 40.88 ಮೂರಾಜೆ 38.1, ದೊಡ್ಡಕೊಪ್ಪ 30.66, ಕೋಡಿಂಬಾಳ 36.38, ಮಜ್ಕಾರು 29.57 ಪುಳಿಕುಕ್ಕು 28.38 ಮತದಾನವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News