ಮಾ.10ರಿಂದ ಬೆಂಗಳೂರು-ಮಂಗಳೂರು ಮಧ್ಯೆ ವಿಮಾನ ಸಂಚಾರ ಆರಂಭ
Update: 2026-03-06 20:52 IST
ಮಂಗಳೂರು, ಮಾ.6: ಬೆಂಗಳೂರು-ಮಂಗಳೂರು ಮಧ್ಯೆ ಮಾ.10ರಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಡರಾತ್ರಿ ದೈನಂದಿನ ವಿಮಾನ ಸಂಚಾರ ಆರಂಭಿಸಲಿದೆ.
ಐಎಕ್ಸ್ 5971 ಬೆಂಗಳೂರಿನಿಂದ ರಾತ್ರಿ 9:25ಕ್ಕೆ ಹೊರಟು ರಾತ್ರಿ 10:40ಕ್ಕೆ ಮಂಗಳೂರಿಗೆ ತಲುಪಲಿದೆ. ಐಎಕ್ಸ್ 5972 ಮಂಗಳೂರಿನಿಂದ ರಾತ್ರಿ 11:10ಕ್ಕೆ ಹೊರಟು ರಾತ್ರಿ 12:20ಕ್ಕೆ ಬೆಂಗಳೂರು ತಲುಪಲಿದೆ.
ಈ ವಿಮಾನ ಸಂಚಾರ ಮಾ.28ರವರೆಗೆ ಇರುತ್ತದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.