×
Ad

ತೊಕ್ಕೊಟ್ಟು: ಅ.12ರಂದು ಎಸ್ ಐಓ ಜಿಲ್ಲಾ ಸಮ್ಮೇಳನ

Update: 2024-10-10 16:17 IST

ಉಳ್ಳಾಲ: ಸೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ(SIO) ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ 'ಬದಲಾವಣೆಯ ಚಿಂತನೆಯನ್ನು ಮರು ಪರಿಶೀಲಿಸೋಣ' ಎಂಬ ಧ್ಯೇಯ ವಾಕ್ಯದೊಂದಿಗೆ ಜಿಲ್ಲಾ ಸಮ್ಮೇಳನವು ಅ.12ರಂದು ಸಂಜೆ 4ಕ್ಕೆ ಗಂಟೆಗೆ ತೊಕ್ಕೊಟ್ಟು ಯೂನಿಟಿ ಹಾಲ್ ಬಳಿ ನಡೆಯಲಿದೆ ಎಂದು ಎಸ್ಐಓ ದ.ಕ. ಜಿಲ್ಲಾಧ್ಯಕ್ಷ ಆಸಿಫ್ ಡಿ.ಕೆ. ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಜಮಾಅತೆ ಇಸ್ಲಾಮಿ ಕೇರಳ ಉಪಾಧ್ಯಕ್ಷ ವಿ.ಟಿ.ಅಬ್ದುಲ್ಲಾ ಕೋಯ ತಂಙಳ್ ಸಮಾವೇಶವನ್ನು ಉದ್ಘಾಟಿಸುವರು. ಸ್ಕೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ರಾಷ್ಟ್ರಾಧ್ಯಕ್ಷ ರಮೀಝ್ ಇ.ಕೆ. ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ, ಎಸ್ಐಒ ಕರ್ನಾಟಕ ರಾಜ್ಯಾಧ್ಯಕ್ಷ ಜೀಶಾನ್ ಅಖಿಲ್, ಸಲೀಂ ಮಂಬಾಡ್, ಜಮಾಅತೆ ಇಸ್ಲಾಮೀ ಕರ್ನಾಟಕ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಮಹಮ್ಮದ್ ಮುಸ್ತಫ, ಸಲ್ವಾನ್, ಮಂಗಳೂರು ನಗರಾಧ್ಯಕ್ಷ ಮುನ್ಝಿರ್ ಅಹ್ಸನ್, ಸಮ್ಮೇಳನ ಸಂಚಾಲಕ ಹುನೈನ್ ಹುಸೇನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News