×
Ad

ಸೋಲಾರ್ ಸೂರ್ಯ ಘರ್ ಯೋಜನೆಗೆ 13 ಗ್ರಾಮಗಳ ಆಯ್ಕೆ

Update: 2025-07-15 20:50 IST

ಮಂಗಳೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ ಮಾದರಿ ಸೋಲಾರ್ ಗ್ರಾಮವನ್ನು ಆಯ್ಕೆ ಮಾಡುವ ಸಲುವಾಗಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ 13 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.

ನೆಲ್ಯಾಡಿ, ಬೆಳ್ಳಾರೆ, ಕೆಯ್ಯೂರು, ಒಳಮೊಗ್ರು, ನರಿಮೊಗ್ರು, ಉಜಿರೆ, ನರಿಕೊಂಬು, ತೆಂಕಮಿಜಾರು, ಪುತ್ತಿಗೆ, ಬೆಳುವಾಯಿ, ಅಡ್ಡೂರು, ಮೂಳೂರು, ತಲಪಾಡಿ ಗ್ರಾಮಗಳು ಸೋಲಾರ್ ಸೂರ್ಯಘರ್ ಯೋಜನೆಗೆ ಆಯ್ಕೆಯಾಗಿವೆ.

ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯಡಿ ಸೋಲಾರ್ ಅಳವಡಿಸುವಂತೆ ಗ್ರಾಮ ಮಟ್ಟದಲ್ಲಿ ಜನರಿಗೆ ಉತ್ತೇಜನ ನೀಡುವಂತೆ ಸೂಚಿಸಲಾಗಿದೆ. ಸ್ಪರ್ಧೆಯ ಕಾಲಾವಧಿಯು ಜುಲೈ 1ರಿಂದ ಡಿಸೆಂಬರ್ 31ರವರೆಗೆ ಇರುತ್ತದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News