×
Ad

ಎಸೆಸ್ಸೆಲ್ಸಿ 2 ಪರೀಕ್ಷೆ: ದ.ಕ.ಜಿಲ್ಲೆಗೆ ಶೇ.35.66 ಫಲಿತಾಂಶ

Update: 2025-06-13 22:58 IST

ಮಂಗಳೂರು, ಜೂ.13: ಎಸೆಸ್ಸೆಲ್ಸಿ 2 ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ದ.ಕ.ಜಿಲ್ಲೆಯು ಶೇ.35.66 ಫಲಿತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ 2,785 ವಿದ್ಯಾರ್ಥಿಗಳ ಪೈಕಿ 993 ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದಿದ್ದಾರೆ.

ಬಂಟ್ವಾಳ ಶೈಕ್ಷಣಿಕ ವಲಯದಲ್ಲಿ 760 ವಿದ್ಯಾರ್ಥಿಗಳ ಪೈಕಿ 222, ಬೆಳ್ತಂಗಡಿ ವಲಯದಲ್ಲಿ 349 ಮಂದಿಯ ಪೈಕಿ 154, ಮಂಗಳೂರು ಉತ್ತರ ವಲಯದ ಪೈಕಿ 449 ಮಂದಿಯ ಪೈಕಿ 153, ಮಂಗಳೂರು ದಕ್ಷಿಣ ವಲಯದ ಪೈಕಿ 541 ಮಂದಿಯ ಪೈಕಿ 157, ಮೂಡುಬಿದಿರೆ ವಲಯದ 145 ಮಂದಿಯ ಪೈಕಿ 72, ಪುತ್ತೂರು ವಲಯದ 341 ಮಂದಿಯ ಪೈಕಿ 152, ಸುಳ್ಯದ 200 ಮಂದಿಯ ಪೈಕಿ 83 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಕಾಟಿಪಳ್ಳದ ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿಕ್ರಂ ಶೈಲೇಶ್ ನಾಯಕ್ 622 ಅಂಕ, ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಶರಧಿ 622 ಅಂಕ ಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News