ಜೂ. 20: ’ಮರೆಯಲಾಗದ ಬ್ಯಾರಿ ಮಹನೀಯರು’ ಪುಸ್ತಕಗಳ ಬಿಡುಗಡೆ
Update: 2025-06-18 18:35 IST
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಪ್ರಕಟಿಸಿರುವ ’ಮರೆಯಲಾಗದ ಬ್ಯಾರಿ ಮಹನೀಯರು ಭಾಗ-1 (ಮರು ಮುದ್ರಣ) ಮತ್ತು ಭಾಗ-2 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವು ಜೂ.20ರ ಸಂಜೆ 4ಕ್ಕೆ ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ.
ರಾಜ್ಯ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದು, ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು. ಎಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಶಯ ಭಾಷಣ ಮಾಡಲಿದ್ದು, ಬ್ಯಾರಿ ಇನ್ಫೊ.ಕಾಂನ ಮುಖ್ಯಸ್ಥ ಬಿ.ಎ.ಮುಹಮ್ಮದ್ ಆಲಿ ಕಮ್ಮರಡಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪುಸ್ತಕಗಳ ಸಂಪಾದಕ ಹಂಝ ಮಲಾರ್ ಪುಸ್ತಕಗಳ ಪರಿಚಯ ಮಾಡಲಿದ್ದಾರೆ ಎಂದು ಅಕಾಡಮಿಯ ರಿಜಿಸ್ಟ್ರಾರ್ ರಾಜೇಶ್ ಜಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.