×
Ad

ಕರ್ನಾಟಕದ 2007ನೆ ಬ್ಯಾಚ್ ಸಖಾಫಿ ಸಂಗಮ

Update: 2025-10-05 18:34 IST

ಮಂಗಳೂರು : ಕರ್ನಾಟಕದ 2007ನೇ ಬ್ಯಾಚಿನ ಸಖಾಫಿಗಳ ಸಂಗಮವು ನಗರದ ಪಡೀಲಿನ ಇಲ್ಮ್ ಸೆಂಟರಿನಲ್ಲಿ ನಡೆಯಿತು. ಸಯ್ಯಿದ್ ಹಸನ್ ಸಖಾಫಿ ವಾರಣಾಕ್ಕರ ತಂಳ್ ಅಧ್ಯಕ್ಷತೆ ವಹಿಸಿದ್ದರು. ಹನೀಫ್ ಸಖಾಫಿ ಕಿನ್ಯ ಉದ್ಘಾಟಿಸಿದರು.

2007ನೆ ಬ್ಯಾಚಿನ ಸಖಾಫಿ ಶೂರಾದ ಕನ್ವೀನರ್ ಲುಕ್ಮಾನುಲ್ ಹಕೀಂ ಸಖಾಫಿ ಮುಕ್ಕಂ, ಸಖಾಫಿ ಶೂರಾದ ಕ್ಯಾಬಿನೆಟ್ ನಾಯಕರಾದ ನವಾಝ್ ಸಖಾಫಿ ಉಳ್ಳಾಲ ಮತ್ತು ಅಲೀ ಸಖಾಫಿ ತಾನೂರು, ಅಬ್ದುರ‌್ರಶೀದ್ ಸಖಾಫಿ ಆನಕ್ಕಯಂ, ನಸೀರ್ ಸಖಾಫಿ ಪುಲಿಕ್ಕಲ್ ಮಾತನಾಡಿದರು. ಸಯ್ಯಿದ್ ಹಸನ್ ಸಖಾಫಿ ತಂಳ್ ದುಆಗೈದರು.

ಸಯ್ಯಿದ್ ಹಸನ್ ಸಖಾಫಿ ವಾರಣಾಕ್ಕರ, ಲುಕ್ಮಾನುಲ್ ಹಕೀಂ ಸಖಾಫಿ ಮುಕ್ಕಂ, ಅಬ್ದುರ‌್ರಶೀದ್ ಸಖಾಫಿ ಆನಕ್ಕಯಂ, ಅಲಿ ಸಖಾಫಿ ತಾನೂರ್, ನಸೀರ್ ಸಖಾಫಿ ಪುಲಿಕ್ಕಲ್, ಹೈದರ್ ಸಖಾಫಿ ಕುಂಜತ್ತೂರು, ಅಬ್ದುಲ್ ಖಾದರ್ ಸಖಾಫಿ ಕೊಲ್ಲಂ ಪಾಡಿ ಸಹಿತವಿರುವ ಸಖಾಫಿ ಶೂರಾದ ನಾಯಕರ ಮುಂದಾಳುತ್ವದಲ್ಲಿ 2007ನೇ ಬ್ಯಾಚ್ ಕರ್ನಾಟಕ ಸಖಾಫೀಸ್ ನೂತನ ಸಮಿತಿ ಅಸ್ತಿತ್ವಕ್ಕೆ ತರಲಾಯಿತು.

ಚೇರ್ಮಾನಾಗಿ ಇಬ್ರಾಹಿಂ ಸಖಾಫಿ ಕಬಕ, ಚೀಫ್ ಕನ್ವೀನರಾಗಿ ನವಾಝ್ ಸಖಾಫಿ ಉಳ್ಳಾಲ, ಫೈನಾನ್ಷಿಯಲ್ ಕಾರ್ಯದರ್ಶಿಯಾಗಿ ಹನೀಫ್ ಸಖಾಫಿ ಕಿನ್ಯಾ ಆಯ್ಕೆಯಾದರು. ವೈಸ್ ಚೇರ್ಮಾನುಗಳಾಗಿ ಅಬ್ದುರ‌್ರಹ್ಮಾನ್ ಸಖಾಫಿ ಬೀಟಿಗೆ, ಇಸ್ಹಾಕ್ ಸಖಾಫಿ ನಂದಾವರ, ಕನ್ವೀನರುಗಳಾಗಿ ಸೈಫುಲ್ಲಾ ಸಖಾಫಿ ನಾವುಂದ, ಮಸ್ತಫಾ ಸಖಾಫಿ ಬೇಂಗಿಲ, ಕೋಆರ್ಡಿನೇಟರುಗಳಾಗಿ ಹಮೀದ್ ಸಖಾಫಿ ಬೆಳ್ಳಾರೆ, ಅಶ್ರಫ್ ಸಖಾಫಿ ಪೆರುವಾಯಿ, ಉಸ್ಮಾನ್ ಸಖಾಫಿ ಕೊಡಿಪ್ಪಾಡಿ, ಶಾಹುಲ್ ಹಮೀದ್ ಸಖಾಫಿ ಪಾನಾಜೆ, ಫಾರೂಕ್ ಸಖಾಫಿ ಮದನಿ ನಗರ, ಅಶ್ರಫ್ ಸಖಾಫಿ ಕನ್ಯಾನ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸುಲೈಮಾನ್ ಸಖಾಫಿ ಗರಗಂದೂರು, ಅಬ್ದುರ‌್ರಶೀದ್ ಕೊಟ್ಟಮುಡಿ ಕೊಡಗು, ಅಶ್ರಫ್ ಸಖಾಫಿ ಮುರ, ಅಶ್ರಫ್ ಸಖಾಫಿ ತುರ್ಕಳಿಕೆ, ಶಬೀರ್ ಸಖಾಫಿ ಉಡುಪಿ, ಜಮಾಲುದ್ದೀನ್ ಸಖಾಫಿ ಮುದುಂಗಾರ್ ಅವರನ್ನು ಆಯ್ಕೆ ಮಾಡಲಾಯಿತು. ಇಬ್ರಾಹಿಂ ಸಖಾಫಿ ಕಬಕ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News