‘ಮಹಬ್ಬ ಫ್ಯಾಮಿಲಿ ಫೆಸ್ಟ್ 2024’ ಪೋಸ್ಟರ್ ಬಿಡುಗಡೆ
Update: 2023-12-09 20:14 IST
ದುಬೈ: ವಿದೇಶಿ ಕನ್ನಡಿಗರ ಸಂಘಟನೆ ‘ಕರ್ನಾಟಕ ಕಲ್ಚರಲ್ ಫೌಂಡೇಶನ್’ ತನ್ನ ಎರಡನೆ ಆವೃತ್ತಿಯ ‘ಮಹಬ್ಬ ಫ್ಯಾಮಿಲಿ ಫೆಸ್ಟ್ 2024’ರ ಪೋಸ್ಟರ್‌ನ್ನು ದುಬೈ ಮರ್ಕಝಿನಲ್ಲಿ ಇಂಡಿಯನ್ ಗ್ರಾಂಡ್ ಮುಫ್ತಿ ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಬಿಡುಗಡೆಗೊಳಿಸಿದರು.
ಈ ಸಂದರ್ಭ ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಯು.ಟಿ. ಇಫ್ತಿಕಾರ್, ಬನ್ಯಾಸ್ ಸ್ಪೈಕ್ ಹಾಜಿ ಅಬ್ದುಲ್ ರಹ್ಮಾನ್, ಅಬ್ದುಲ್ ಜಲೀಲ್ ನಿಝಾಮಿ, ಝೈನುದ್ದೀನ್ ಹಾಜಿ, ಮೂಸಾ ಹಾಜಿ ಬಸರ, ಶಾಹುಲ್ ಹಮೀದ್ ಸಖಾಫಿ, ಶುಕೂರ್ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಯುಎಇಯಲ್ಲಿರುವ ಕನ್ನಡಿಗರು ಕುಟುಂಬದೊಂದಿಗೆ ಕಾರ್ಯಕ್ರಮ ದಲ್ಲಿ ಭಾಗವಹಿಸಬಹುದು ಎಂದು ಪ್ರಕಟನೆ ತಿಳಿಸಿದೆ.