ಕಂಬಳಬೆಟ್ಟು: ಫೆ. 21 ಮತ್ತು 22 ರಂದು ಮಸ್ಜಿದ್, ಮದ್ರಸ, ಸಭಾಭವನ ಉದ್ಘಾಟನಾ ಸಮಾರಂಭ; ಸೌಹಾರ್ದ ಸಂಗಮ
ವಿಟ್ಲ: ಕಂಬಳಬೆಟ್ಟು ಶಾಂತಿನಗರ ನೂರುಲ್ ಇಸ್ಲಾಂ ಉರ್ದು ಮತ್ತು ಅರೇಬಿಕ್ ಮದ್ರಸ, ಫಝಲ್ ಜುಮಾ ಮಸ್ಜಿದ್, ಸಭಾಭವನ ಉದ್ಘಾಟನಾ ಸಮಾರಂಭವು ಸೌಹಾರ್ದ ಸಂಗಮ ಸ್ವಲಾತ್ ವಾರ್ಷಿಕ ಮತ್ತು ಮದನೀಯಂ ಕಾರ್ಯಕ್ರಮ ದೊಂದಿಗೆ ಫೆ. 21 ಮತ್ತು 22 ರಂದು ನಡೆಯಲಿದೆ ಎಂದು ಹಾರೀಸ್ ಮದನಿ ಇಮಾಂ ಶಾಂತಿನಗರ ಅವರು ತಿಳಿಸಿದರು.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠೆಯಲ್ಲಿ ಮಾತನಾಡಿ ಫೆ. 21ರಂದು ಬೆಳಿಗ್ಗೆ ಸಭಾಭವನ ಉದ್ಘಾಟನೆ ನಡೆಯಲಿದ್ದು, ಶೈಖುನಾ ಓಲೆಮುಂಡೋವ್ ಉಸ್ತಾದ್ ಮತ್ತು ಇಬ್ರಾಹಿಂ ಮದನಿ ಕಂಬಳಬೆಟ್ಟು ಭಾಗವಹಿಸಲಿದ್ದಾರೆ. ಕ್ಲಾಸ್ ಕೆ. ಅಬ್ದುಲ್ ಗಫೂರ್ ಮತ್ತು ಕೆ ಖಲಂದರ್ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ಮಸ್ಜಿದ್ ಉದ್ಘಾಟನೆ, ವಕ್ಫ್ ನರ್ವಹಣೆ ಹಾಗೂ ಜುಮಾ ಉದ್ಘಾಟನೆ ನಡೆಯಲಿದ್ದು, ಖುದ್ವತುಸ್ಸಾದಾತ್ ಅಸ್ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್, ಅಸ್ಸಯ್ಯಿದ್ ಝೈನುಲ್ ಅಬೀದೀನ್ ಸಖಾಫಿ ತಂಙಳ್ ಎಣ್ಮೂರು, ಅಸ್ಸಯ್ಯಿದ್ ಮಶ್ ಊದ್ ತಂಙಳ್ ಕೂರತ್ , ಅಸ್ಸಯ್ಯಿದ್ ಶರಫುದ್ದೀನ್ ತಂಙಳ್ ಸಾಲ್ಮರ, ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್, ಶೈಖುನಾ ಓಲೆಮುಂಡೋವ್ ಉಸ್ತಾದ್, ಇಬ್ರಾಹಿಂ ಮದನಿ ಕಂಬಳಬೆಟ್ಟು ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಂಜೆ ನಡೆಯುವ ಸೌಹಾರ್ದ ಸಂಗಮ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಇಬ್ರಾಹಿಂ ಮದನಿ ಕಂಬಳಬೆಟ್ಟು ಉದ್ಘಾಟಿಸಲಿದ್ದಾರೆ. ಅಬ್ದುಲ್ ಗಫೂರ್ ಅಧ್ಯಕ್ಷತೆ ವಹಿಸಲಿದ್ದಾರೆ. ಹುಸೈನ್ ಮುಈನಿ ಮಾರ್ನಾಡ್ ಸೌಹಾರ್ದ ಭಾಷಣ ಮಾಡಲಿದ್ದಾರೆ. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಸೈಂಟ್ ರೀಟಾ ಶಾಲೆಯ ಸುನೀಲ್ ಪ್ರವೀನ್ ಪಿಂಟೋ ಭಾಗವಹಿಸಲಿದ್ದಾರೆ.
ಫೆ. 22ರಂದು ಸಂಜೆ ಅಬ್ದುಲ್ ಲತೀಫ್ ಸಖಾಫಿ ಕಾಂದಪುರಂ ನೇತೃತ್ವದಲ್ಲಿ ಮದನೀಯಂ ಮಜ್ಲಿಸ್ ನಡೆಯಲಿದೆ. ಡಾ. ಮುಹಮ್ಮದ್ ಫಾಝೀಲ್ ರಝ್ವಿ ಕಾವಲಕಟ್ಟೆ ದುವಾಃ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿ ಯಲ್ಲಿ ಅಧ್ಯಕ್ಷ ಅಬ್ದುಲ್ ರಝಾಕ್ ಶಾಂತಿನಗರ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ , ಸದಸ್ಯರಾದ ರಫೀಕ್ ಎಂ ಕೆ, ಮಹಮ್ಮದ್ ಇಲ್ಯಾಸ್, ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಅದ್ರು, ಅಬ್ದುಲ್ ಸಮದ್ ಉಪಸ್ಥಿತರಿದ್ದರು.