×
Ad

ಜೂನ್‌ 27 ರಿಂದ ಪೊಸೋಟ್ ತಂಙಳ್ ಉರೂಸ್

Update: 2024-06-26 15:03 IST

ಉಳ್ಳಾಲ: ಹೊಸಂಗಡಿ ಮಳಹರ್ ವಿದ್ಯಾ ಸಂಸ್ಥೆಯ ಸ್ಥಾಪಕ  ಮರ್ಹೂಂ ಸಯ್ಯದ್ ಉಮರುಲ್ ಫಾರೂಕ್ ಅಲ್ ಬುಖಾರಿ ಪೊಸೋಟ್ ತಂಙಳ್ ಅವರ 9ನೇ ಉರೂಸ್ ಕಾರ್ಯಕ್ರಮವು ಜೂನ್ 27 ರಿಂದ 30ರ ತನಕ ಹೊಸಂಗಡಿ ಪೊಸೋಟ್ ತಂಙಳ್ ಮಖಾಂ ಶರೀಫ್‌ನಲ್ಲಿ ನಡೆಯಲಿದೆ‌ ಎಂದು ಪೊಸೋಟ್ ತಂಙಳ್ ಉರೂಸ್ ಪ್ರಚಾರ ಸಮಿತಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಖ್ ತಿಳಿಸಿದರು.

ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜೂ 27 ಗುರುವಾರದಂದು ಸಂಜೆ 4.30ಕ್ಕೆ ಸಯ್ಯದ್ ಅತಾವುಲ್ಲಾ ತಂಙಳ್ ಉದ್ಯಾವರ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸಮಿತಿ ಸದಸ್ಯರಾದ ಸಯ್ಯದ್ ಅಶ್ರಫ್ ಅಸ್ಸಖಾಫ್ ತಂಙಳ್ ಆದೂರು ಝಿಯಾರತ್‌ಗೆ ನೇತೃತ್ವ ನೀಡಲಿದ್ದಾರೆ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಅಧ್ಯಕ್ಷ ಸಯ್ಯದ್ ಕೆ.ಎಸ್.ಆಟಕ್ಕೋಯ ತಂಙಳ್ ಕುಂಬೋಲ್ ಉದ್ಘಾಟಿಸುವರು. ಕರ್ನಾಟಕ ಹಾಜಿ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅಧ್ಯಕ್ಷತೆ ವಹಿಸುವರು. ಸಯ್ಯದ್ ಇಂಬಿಚ್ಚಿಕ್ಕೋಯ ತಂಙಳ್ ಎಟ್ಟಿಕ್ಕುಳಂ ದುಆ ನೆರವೇರಿಸಲಿದ್ದಾರೆ . ಸಯ್ಯದ್ ಶಹೀ‌ರ್ ಅಲ್ ಬುಖಾರಿ ತಂಙಳ್ ಪೊಸೋಟ್ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದರು.

ಜೂ 28 ಶುಕ್ರವಾರ ಸಂಜೆ 7 ಗಂಟೆಗೆ ಖಾಝಿ ಸಯ್ಯಿದ್ ಕೂರತ್ ತಂಙಳ್ ನೇತೃತ್ವದಲ್ಲಿ ನಸೀಹತ್‌ ಮಜ್ಲಿಸ್‌ ನಡೆಯಲಿದ್ದು , ಜೂ. 29 ಶನಿವಾರ ಸಂಜೆ 7 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಭಾಗವಹಿಸಲಿದ್ದಾರೆ.

ಜೂ 30 ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಮೌಲಿದ್ ಮಜ್ಲಿಸ್, ಬಳಿಕ ಅನ್ನದಾನ ನಡೆಯಲಿದೆ. ಕರ್ನಾಟಕ ಕೇರಳ ಹಾಗೂ ಅನ್ಯ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಪೊಸೋಟ್ ತಂಙಳ್ ಅವರ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪೊಸೋಟ್ ತಂಙಳ್ ಉರೂಸ್ ಪ್ರಚಾರ ಸಮಿತಿ ಕರ್ನಾಟಕ ಇದರ ಅಧ್ಯಕ್ಷ ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ , ಕೋಶಾಧಿಕಾರಿ ಹಾಜಿ ಅಬೂಬಕರ್ ಬೊಳ್ಳಾಯಿ, ಕಾರ್ಯದರ್ಶಿ ಅಬೂ ಸ್ವಾಲಿಹ್ ಗೇರುಕಟ್ಟೆ , ಸುನ್ನೀ ಯುವಜನ ಸಂಘ ಕರ್ನಾಟಕ ಸದಸ್ಯ ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್ ,ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯದರ್ಶಿ ರಹೀಂ ಸಅದಿ ಖತರ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News