×
Ad

ಹೆಜಮಾಡಿ: ಜ.28ರಂದು ಉಚಿತ ಆ್ಯಂಬುಲೆನ್ಸ್ ಸೇವೆ ಲೋಕಾರ್ಪಣೆ

Update: 2024-01-24 21:02 IST

ಪಡುಬಿದ್ರಿ: ರೋಲ್ಫಿ ಡಿಕೋಸ್ತರವರ ಆಪ್ತ ಬಳಗದ ವತಿಯಿಂದ ಹೆಜಮಾಡಿ ಆಸುಪಾಸಿನಲ್ಲಿ ಕಾರ್ಯಾಚರಿಸಲು ಉಚಿತ ಆಂಬುಲೆನ್ಸ್ ಸೇವೆಯು ಜನವರಿ 28ರಂದು ಲೋಕಾರ್ಪಣೆ ನಡೆಯಲಿದೆ.

ಈ ಬಗ್ಗೆ ಕಾಪು ಪ್ರೆಸ್‍ಕ್ಲಬ್‍ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಬಳಗದ ರಾಲ್ಫಿ ಡಿಕೋಸ್ತ ಮಾಹಿತಿ ನೀಡಿದರು.

ರೂ.10 ಲಕ್ಷ ವೆಚ್ಚದಲ್ಲಿ ಖರೀದಿಸಿರುವ ನೂತನ ಉಚಿತ ಆ್ಯಂಬುಲೆನ್ಸ್ ಸೇವೆಯು ನಂದಿಕೂರಿನ ಕೈಗಾರಿಕಾ ಪ್ರದೇಶದಲ್ಲಿ ಬೆಳಿಗ್ಗೆ 11 ಗಂಟೆಗೆ ಪಡುಬಿದ್ರಿ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಪ್ರಸನ್ನ ಉದ್ಘಾಟಿಸಲಿದ್ದಾರೆ.

ವಂ. ಸಿಲ್ವೆಸ್ಟರ್ ಡಿಕೋಸ್ತ, ಅನಂತ ಪದ್ಮನಾಭ ಆಸ್ರಣ್ಣ, ಹಾಜಿ ಅಶ್ರಫ್ ಸಖಾಫಿ, ಹರಿನಾರಾಯಣ ಅಸ್ರಣ್ಣ, ವಂ.ಕ್ಸೇವಿಯರ್ ಗೋಮ್ಸ್, ವಂ. ಮಾರ್ಸೆಲ್ ಸಲ್ದಾನ, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಹಾಗೂ ಹೆಜಮಾಡಿ ಗ್ರಾಮ ಪಂ. ಅಧ್ಯಕ್ಷೆ ರೇಶ್ಮಾ ಮೆಂಡನ್ ಉಪಸ್ಥಿತರಿರುವುದಾಗಿ ತಿಳಿಸಿದರು.

24 ಗಂಟೆಗಳಲ್ಲೂ ಹೆಜಮಾಡಿ ಹಾಗೂ ನಡ್ಸಾಲು ಗ್ರಾಮಗಳ ವ್ಯಾಪ್ತಿಯ ಬಡವರು, ಕಷ್ಟ, ಕಾರ್ಪಗಳಿಗೆ ಒಳಗಾದವರ ಅಪಘಾತ ಅಥವಾ ಅನಾರೋಗ್ಯದ ಸಂದರ್ಭಗಳಲ್ಲಿ 9494685454ಗೆ ಕರೆಯೊಂದನ್ನು ರವಾನಿಸಿದಲ್ಲಿ ಕೂಡಲೇ ತಮ್ಮ ಸಹಾಯಕ್ಕೆ ಈ ಆ್ಯಂಬುಲೆನ್ಸ್ ಸೇವೆಯು ಉಚಿತವಾಗಿ ಲಭ್ಯವಿರುವುದಾಗಿಯೂ, ಮುಂದಿನ ದಿನಗಳಲ್ಲಿ ಜನತೆಗೆ ತುರ್ತು ಸಂದರ್ಭಗಳಲ್ಲಿ ಬೇಕಾಗುವ ಶೀಥಲೀಕರಣ ಪೆಟ್ಟಿಗೆಯನ್ನೂ ಒದಗಿಸುವ ಯೋಜನೆಯೂ ತಮ್ಮಲ್ಲಿರುವುದಾಗಿ ರಾಲ್ಫಿ ಅವರು ತಿಳಿಸಿದ್ದಾರೆ.

ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಹಾಗೂ ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಶ್ಮಾ ಮೆಂಡನ್, ಮಾಜಿ ಅಧ್ಯಕ್ಷರಾದ ಸುಭಾಸ್ ಜಿ. ಸಾಲ್ಯಾನ್, ಪಾಂಡುರಂಗ ಸಿ.ಕರ್ಕೇರ, ಸುಧೀರ್ ಕರ್ಕೇರ, ರಾಜು ಹೆಜಮಾಡಿ, ಸನಾ ಇಬ್ರಾಹಿಂ ಹೆಜಮಾಡಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News