×
Ad

ಮೇ 29ರಂದು ಮಂಗಳೂರು, ಉಳ್ಳಾಲದ ವಿವಿಧೆಡೆ ವಿದ್ಯುತ್‌ ನಿಲುಗಡೆ: ವಿವಿಧ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ

Update: 2024-05-27 19:45 IST

ಮಂಗಳೂರು: ಫೀಡರ್‌ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನಲೆಯಲ್ಲಿ ಮೇ 29ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ಮಂಗಳೂರು ನಗರ ಹಾಗೂ ಉಳ್ಳಾಲದ ವಿವಿಧೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಅಂದು 110/33/11ಕೆ.ವಿ. ಕುಲಶೇಖರ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಮರೋಳಿ ಫೀಡರ್‌ನ ಮರೋಳಿ, ಜಯನಗರ, ವಸಂತನಗರ, ಸೈಮನ್‌ ಲೇನ್‌, ರಾಮನಗರ, ಸೂರ್ಯನಾರಾಯಣ ದೇವಸ್ಥಾನ, ಎಂಜಲೋರ್‌ ಚರ್ಚ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ.

ಅದೇ ರೀತಿ 110/33/11 ಕೆ.ವಿ. ಜೆಪ್ಪು ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಸೂಟರ್‌ಪೇಟೆ ಫೀಡರ್‌ನ ಫಿಶರೀಸ್‌ ಕಾಲೇಜ್‌, ಸೂಟರ್‌ ಪೇಟೆ, ವೆಲೆನ್ಸಿಯ, ಜೆಪ್ಪು ಮಾರ್ಕೆಟ್‌, ನಂದಿಗುಡ್ಡ, ಯೆನಪೋಯ ಕ್ಲಸ್ಟಲ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಕಿನ್ಯಾ/ ಪಜೀರ್/ ಬೋಳಿಯಾರ್/ ಉಳ್ಳಾಲ:-110/33/11 ಕೆ.ವಿ. ಕೊಣಾಜೆ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಕಿನ್ಯಾ, 11 ಕೆ.ವಿ. ಪಜೀರ್ ಮತ್ತು 11 ಕೆ.ವಿ. ಬೋಳಿಯಾರ್‌ ಫೀಡರ್‌ಗಳ ಹಾಗೂ 33/11ಕೆ.ವಿ. ತೊಕ್ಕೊಟ್ಟು ಉಪ ಕೇಂದ್ರದಿಂದ ಹೊರಡುವ 11 ಕೆ.ವಿ. ಉಳ್ಳಾಲ, 11 ಕೆ.ವಿ .ಕೋಟೆಕಾರ್‌, 11 ಕೆ.ವಿ. ಕುತ್ತಾರ್‌, 11 ಕೆ.ವಿ. ಸೋಮೇಶ್ವರ, 11 ಕೆ.ವಿ. ಮಂಚಿಲ, 11 ಕೆ.ವಿ. ತೊಕ್ಕೊಟ್ಟು, 11 ಕೆ.ವಿ. ಅಬ್ಬಕ್ಕ ಮತ್ತು 11 ಕೆ.ವಿ. ಮೇಲಂಗಡಿ ಫೀಡರ್‌ಗಳ ಗ್ರೀನ್‌ಭಾಗ್‌ ನಾಟೆಕಲ್‌, ಸಂಕೇಶ್‌, ಬೆಳರಿಂಗೆ, ಮಿಂಪ್ರಿ, ಪನೀರ್‌ ಸೈಟ್‌, ನಡುಕುಮೇರ್‌, ಉಕ್ಕುಡ, ಕೈಕಂಬ, ದೇವಿನಗರ, ಪಂಜಳ, ಮಧುಪಾಲ್‌, ಕೆ.ಸಿ. ರೋಡ್‌, ಹೊಸನಗರ, ಕೆ.ಸಿ.ನಗರ, ಅಲಂಕಾರ್‌ಗುಡ್ಡೆ, ಪಿಲಿಕುರ್‌, ತಲಪಾಡಿ, ಮೇಲಿನ ತಲಪಾಡಿ, ನಾರ್ಲ, ತಚ್ಚಾಣಿ, ಗ್ರಾಮಚಾವಡಿ, ನ್ಯೂಪಡ್ಪು, ಹರೇಕಳ, ಕಡಪು,ಬೈತಾರ್‌, ದೆಬ್ಬೇಲಿ, ಕುತ್ತಿಮುಗೇರು, ಸಂಪಿಗೆದಡಿ, ಪಾವೂರು, ಉಳಿಯ, ಮಲಾರ್‌, ಪಾವೂರು, ದುರ್ಗಾ ಕಾಂಪ್ಲೆಕ್ಸ್‌, ಗಾಡಿಗದ್ದೆ, ಬಿ.ಐ.ಟಿ ಕಾಲೇಜ್‌, ಧರ್ಮನಗರ, ಇನೋಳಿ, ಕಿಲ್ಲೂರು, ಕೊಪ್ಪರಿಗೆ, ಪಜೀರ್‌ ಬರಕ, ಬೆಂಗಡಿಪದವು, ಕಾಪಿಕಾಡ್‌, ಪಜೀರ್‌ ಓಲ್ಡ್‌ ಚರ್ಚ್‌, ಗುಂಪೆಕಲ್ಲು, ಆರಂತೋಡಿ, ಇನೋಳಿಪದವು, ಮಾಸ್ತಿಕಟ್ಟೆ, ಅಬ್ಬಕ್ಕ ಸರ್ಕಲ್‌, ಉಳ್ಳಾಲ, ಸುಂದರಿ ಭಾಗ್‌, ಸಮ್ಮರ್‌ ಸ್ಯಾಂಡ್‌, ಮುಕ್ಕಚೇರಿ, ಕೈಕೊ, ಹಿಲರಿ ನಗರ, ಸುಭಾಶ್‌ ನಗರ, ಹೈದಾರಾಲಿ ನಗರ, ಸುಲ್ತಾನ್‌ ನಗರ, ಬಾಬು ಕಂಪೌಂಡ್‌, ಮೇಲಂಗಡಿ, ದರ್ಗಾ, ಮಿಲ್ಲತ್‌ನಗರ, ಬಸ್ತಿಪಡ್ಪು, ಉಳಿಯ ಗೋಳಿಯಡಿ, ಸೇನೆರೆಬೈಲು, ಉಳಿಯ ಟೆಂಪಲ್‌, ಮಂಜಣ್ಣ ಕುದ್ರು, ಮೊಗವೀರ ಪಟ್ನ, ಕೋಡಿ, ಕೋಟಪುರ, ಬಬ್ಬುಕಟ್ಟೆ, ಹಿರಾನಗರ, ನಿತ್ಯಾಧರ್‌ ನಗರ, ಪ್ರಕಾಶ್‌ ನಗರ, ಪಂಡಿತ್‌ ಹೌಸ್‌,ಶಿವಾಜಿನಗರ, ಮುಂಡೋಳಿ, ಸೇವಂತಿಗುಡ್ಡೆ, ಸೇವಂತಿಗುತ್ತು, ಗಂಡಿ, ವಿಜೇತನಗರ, ತಾರಿಪಡ್ಪು, ಓವರ್‌ ಬ್ರಿಡ್ಜ್‌, ಬಂಗೇರ ಲೇನ್‌, ಬಾಕಿಮಾರ್‌, ಬಂಗೇರ ಕಾಲನಿ, ತೊಕ್ಕೊಟ್ಟು ಒಳಪೇಟೆ, ಪಿಲಾರ್‌, ಪಿಲಾರ್‌ ಶಾಲೆ, ಅಂಬಿಕಾ ರೋಡ್‌, ಸರಸ್ವತಿ ಕಾಲನಿ,ನೆಹರೂನಗರ, ಪ್ರತಾಪ್‌ ನಗರ, ಶಿವಶಕ್ತಿನಗರ, ಸೋಮೇಶ್ವರ ಟೆಂಪಲ್‌, ಸುಲ್ತಾನ್‌ ನಗರ, ತೊಕ್ಕೊಟ್ಟು, ಕಲ್ಲಾಪು, ಬರ್ದು,ಉಳ್ಳಾಲ, ಸೋಮೇಶ್ವರ, ಕುತ್ತಾರ್‌, ಕೋಟೆಕಾರ್‌, ಬೀರಿ, ತಲಪಾಡಿ, ಅಂಬಿಕಾರೋಡ್‌, ಅಡ್ಕ, ಮಡ್ಯಾರ್‌, ಮಾಡೂರು, ದೇವಿಪುರ,ಕಿನ್ಯಾ, ಕೊಣಾಜೆ, ಅಸೈಗೋಳಿ, ದೇರಳಕಟ್ಟೆ, ಹರೇಕಳ, ಮುನ್ನೂರು, ಪಾವೂರು, ಇನೋಳಿ, ಬೋಳಿಯಾರ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News