ದೇರಳಕಟ್ಟೆ: ಗ್ರಾಮ ಆಡಳಿತ ಅಧಿಕಾರಿಗಳ ಮೌನ ಮುಷ್ಕರ 4ನೇ ದಿನಕ್ಕೆ
Update: 2025-02-13 18:15 IST
ಉಳ್ಳಾಲ: ಮೂಲಭೂತ ಸೌಕರ್ಯ ಸಹಿತ ಹಲವು ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಆಡಳಿತ ಅಧಿಕಾರಿಗಳ ರಾಜ್ಯ ವ್ಯಾಪಿ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನವಾದ ಗುರುವಾರ ಕೂಡ ಮುಂದುವರಿದಿದೆ. ಗ್ರಾಮಕರಣಿಕರು ಲೇಖನಿ ಸ್ಥಗಿತಗೊಳಿಸಿ ಮೌನವಾಗಿ ಮುಷ್ಕರ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಜಿಲ್ಲಾ ಸಂಘದ ಅಧ್ಯಕ್ಷ ಉಮೇಶ್ ಕಾವಡಿ ಮತ್ತು ಪ್ರಧಾನ ಕಾರ್ಯದರ್ಶಿ ಯಾದ ಅನಿಲ್ ಕುಮಾರ್ ಪೂಜಾರಿ ಅವರು ಆಗಮಿಸಿ ಗ್ರಾಮ ಆಡಳಿತಾಧಿಕಾರಿಗಳ ಸಮಸ್ಯೆಗಳ ಬಗ್ಗೆ ಸರಕಾರದಿಂದ ಸ್ಪಂದನೆ ಸಿಗುವವರೆಗೂ ಮುಷ್ಕರವನ್ನು ಮುಂದುವರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಳ್ಳಾಲ ತಾಲೂಕು ಸಂಘದ ಅಧ್ಯಕ್ಷ ತೌಫೀಕ್, ಪ್ರಧಾನ ಕಾರ್ಯದರ್ಶಿ ನವ್ಯ, ಹಾಗೂ ಸದಸ್ಯರಾದ ನಿಂಗಪ್ಪ ಜೆ, ಸುರೇಶ್, ಅಮ್ಜದ್ ಖಾನ್, ರಶೀದಾ ಬಾನು, ಜಗದೀಶ್ , ರೇಶ್ಮ, ರಾಘವೇಂದ್ರ, ಮನೋಹರ್, ಕಾವ್ಯ, ನಯನ, ಲಾವಣ್ಯ, ಅಕ್ಷಿತ, ಜಯವತಿ,ಅಕ್ಷತಾ , ಚೈತ್ರ ಮತ್ತಿತರರು ಉಪಸ್ಥಿತರಿದ್ದರು.