ಜ. 4 : ‘ದೈವದಶಕಂ’ ಕನ್ನಡ ಗಾಯನ ಧ್ವನಿಸುರುಳಿ ಬಿಡುಗಡೆ
ಮಂಗಳೂರು: ಶ್ರೀ ನಾರಾಯಣ ಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ (ರಿ.) ಆಶ್ರಯದಲ್ಲಿ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆತಿಥ್ಯದಲ್ಲಿ “ದೈವದಶಕಂ” ಆಧ್ಯಾತ್ಮಿಕ ಪ್ರಾರ್ಥನೆಯ ಕನ್ನಡ ಗಾಯನ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಜ. 4ರಂದು ಸಂಜೆ 3.30ಕ್ಕೆ ನಡೆಯಲಿದೆ.
ಕೊಣಾಜೆಯ ಶ್ರೀರಕ್ಷಾ ಎಸ್. ಎಚ್. ಪೂಜಾರಿ ಅವರ ಸಂಗೀತ ಸಂಯೋಜನೆ ಹಾಗೂ ಕಂಠದಲ್ಲಿ ಮೂಡಿಬಂದಿರುವ ಈ ಧ್ವನಿಸುರುಳಿಯನ್ನು ಕೇಂದ್ರದ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ ಅವರು ಬಿಡುಗಡೆಗೊಳಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾದ ಜೈರಾಜ್ ಸೋಮಸುಂದರಂ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾನ್ಯ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು. ಟಿ. ಖಾದರ್, ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಹಾಗೂ ಬಿಲ್ಲವರ ಪರಿಷತ್ ಉಡುಪಿ ಸಂಚಾಲಕ ಶ್ರೀ ನವೀನ್ ಅಮೀನ್ ಶಂಕರಪುರ ಅವರು ಭಾಗವಹಿಸಲಿದ್ದಾರೆ.
ಫೆ. 21ರ ಕುದ್ರೋಳಿ ತೀರ್ಥಾಟನೆಯ ಪೂರ್ವಭಾವಿಯಾಗಿ ಈ ಕಾರ್ಯಕ್ರಮ ಜರಗಲಿದ್ದು, ಎಲ್ಲಾ ಭಕ್ತಾದಿಗಳು ಹಾಗೂ ಗುರು ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ನಾರಾಯಣ ಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ ಪ್ರಕರಟನೆಯಲ್ಲಿ ತಿಳಿಸಿದೆ.