ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅಭಿನಂದಿಸಿದ ಸ್ಪೀಕರ್ ಯುಟಿ ಖಾದರ್
Update: 2026-01-06 20:56 IST
ಮಂಗಳೂರು: ರಾಜ್ಯದ ದೀರ್ಘಾವದಿ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸಿದ ಸಿದ್ದರಾಮಯ್ಯರನ್ನು ಸ್ಪೀಕರ್ ಯು.ಟಿ. ಖಾದರ್ ಅಭಿನಂದಿಸಿದ್ದಾರೆ.
ದೇವರಾಜ್ ಅರಸು ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದಾಗ ಅವರ ಜೊತೆ ನನ್ನ ತಂದೆ ಯು.ಟಿ.ಫರೀದ್ ಶಾಸಕ ರಾಗಿದ್ದರು. ಈಗ ನೀವು ದೀರ್ಘಕಾಲ ಮುಖ್ಯಮಂತ್ರಿಯಾಗಿರುವಾಗ ನಿಮ್ಮ ಜೊತೆ ನಾನು ಉನ್ನತ ಹುದ್ದೆಯಲ್ಲಿರು ವುದು ಸಂತೋಷದ ವಿಚಾರ. ರಾಜ್ಯದ ಜನತೆ ನಿಮ್ಮನ್ನು ಸಿದ್ದರಾಮಯ್ಯರ ಕಾಲ ಎಂದು ಹೆಮ್ಮೆಯಿಂದ ಹೇಳಿಕೊ ಳ್ಳುತ್ತಿದ್ದಾರೆ. ನಿಮ್ಮ ಅವಧಿಯಲ್ಲಿ ನಾವು ಜೊತೆಗಿರುವುದು ನಮಗೂ ಹೆಮ್ಮಯ ವಿಚಾರ. ಮನಸ್ಸುಗಳನ್ನು ಒಡೆಯುವ ಈ ಕಾಲದಲ್ಲಿ ನೀವು ಒಂದಾಗಿಸುವವರಿಗೆ ನಾಯಕತ್ವ ನೀಡಿದ್ದಿರಿ. ನೀವು ಹಿಡಿದಿರುವ ಸಮಾನತೆಯ ಹಣತೆಗೆ ನಾವು ಕೈಜೋಡಿಸುತ್ತೇವೆ. ಶೋಷಿತರ ಹಾಗೂ ದಮನಿತರ ಪರ ನಿಮ್ಮ ದನಿಗೆ ನಾವು ದನಿಗೂಡಿಸುತ್ತೇವೆ ಎಂದು ಸ್ಪೀಕರ್ ಖಾದರ್ ತನ್ನ ಶುಭಾಶಯದಲ್ಲಿ ತಿಳಿಸಿದ್ದಾರೆ.