×
Ad

ಜ.9-11: ಮಂಗಳೂರು ಬೀಚ್ ಉತ್ಸವ

Update: 2026-01-06 19:02 IST

ಮಂಗಳೂರು, ಜ.6: ತಪಸ್ಯ ಫೌಂಡೇಶನ್ ವತಿಯಿಂದ 4ನೇ ಆವೃತ್ತಿಯ ಮಂಗಳೂರು ಟ್ರಯಾಥ್ಲಾನ್, ಮಂಗಳೂರು ಬೀಚ್ ಮ್ಯಾರಥಾನ್ ಹಾಗೂ ಆಲ್ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವ್ ಜ.9ರಿಂದ 11ರವರೆಗೆ ತಣ್ಣೀರುಬಾವಿ ಬೀಚ್‌ನಲ್ಲಿ ಆಯೋಜಿಸಲಾಗಿದೆ.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ತಪಸ್ಯ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ಸಬಿತಾ ಆರ್. ಶೆಟ್ಟಿ, ಈ ಉತ್ಸವದಲ್ಲಿ ಸಂಗ್ರಹವಾಗುವ ನಿಧಿ ಕ್ಯಾನ್ಸರ್ ಪ್ಯಾಲಿಯೇಟಿವ್ ಕೇರ್‌ಗೆ ಬಳಕೆಯಾಗಲಿದೆ ಎಂದರು.

ಬೀಚ್ ಉತ್ಸವದ ಅಂಗವಾಗಿ ಒಲಿಂಪಿಕ್ ಮಟ್ಟದ ಟ್ರಯಥ್ಲಾನ್‌ನಡಿ ಡುಯಾಥ್ಲಾನ್, 40 ಕೆ ಡ್ರೀಮ್ ಸೈಕ್ಲಿಂಗ್, ಒಲಿಂಪಿಕ್ ಡಿಸ್ಟನ್ಸ್ ಟ್ರಯಾಥ್ಲಾನ್, ಸ್ಟ್ರಿಂಟ್ ಟ್ರಯಾಥ್ಲಾನ್, ಟೀಮ್ ರಿಲೇ ಟ್ರಯಾಥ್ಲಾನ್, 1000 ಞ್ರೇಮ್ ಸ್ಟಿಮ್, 500 ಮೀ. ಫನ್ ಸ್ವಿಮ್, ಅಕ್ವಾಥ್ಲಾನ್, ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, 10ಕೆ ಡ್ರೀಮ್ ರನ್, 5ಕೆ ಫನ್ ರನ್ ನಡೆಯಲಿದೆ. ಇದಲ್ಲದೆ ಎಸ್‌ಎಫ್‌ಐ ನ್ಯಾಷನಲ್ ಓಪನ್ ವಾಟರ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್, ಅಗ್ರಿ ಟೆಕ್ ಎಕ್ಸ್‌ಪೋ, ರಾಜ್ಯ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ, ಕೆಡಬ್ಲ್ಯುಎ ರಾಜ್ಯ ಮಟ್ಟದ ಬೀಚ್ ಕುಸ್ತಿ, ಇಮರ್ಜ್ ಬೀಚ್‌ ಸೈಡ್ ಸ್ಟಾರ್ಟಪ್ ಕಾಂಕ್ಲೇವ್, ಬೈಕ್ ಸ್ಟಂಟ್ ಶೋ, ನೃತ್ಯಾಂತಾರ ನೃತ್ಯ ಸಪರ್ಧೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್‌ಶಿಪ್

ಬೀಚ್ ಫೆಸ್ಟಿವಲ್ ಸಂದರ್ಭ ಕರ್ನಾಟಕ ಕುಸ್ತಿ ಸಂಘ ಹಾಗೂ ತಪಸ್ಯ ಫೌಂಡೇಶನ್ ವತಿಯಿಂದ ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್‌ಶಿಪ್ ನಡೆಯಲಿದೆ. ಜ.9ರಂದು ಸಂಜೆ 4 ಗಂಟೆಗೆ ಚಾಂಪಿಯನ್‌ಶಿಪ್‌ಗೆ ಚಾಲನೆ ದೊರೆಯಲಿದೆ. ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಂಡರ್ 15 ವಯೋಮಿತಿ ಹಾಗೂ ಅಂಡರ್ 17 ವಯೋಮಿತಿ ಹಾಗೂ ಹರಿಯ ವಿಭಾಗ ಪುರುಷ ಮತ್ತು ಮಹಿಳಾ ಕುಸ್ತಿ ಪಂದ್ಯಗಳು ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳ ಕುಸ್ತಿ ಪಟುಗಳೊಂದಿಗೆ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಿರುವ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ.

ಈ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ ಕುಸ್ತಿಪಟುಗಳು ರಾಷ್ಟ್ರೀಯ ಬೀಚ್ ರೆಸ್ಲಿಂಗ್ ಚಾಂಪಿಯನ್‌ ಶಿಪ್ ಗೆ ಆಯ್ಕೆಯಾಗಲಿದ್ದಾರೆ. ಜ.9ರಂದು ಬೆಳಗ್ಗೆ 8ರಿಂದ 10 ಗಂಟೆಯವರೆಗೆ ಎಲ್ಲಾ ವಿಭಾಗದ ಕುಸ್ತಿಪಟುಗಳ ದೇಹ‌ ತೂಕ ಪಡೆಯಲಾಗುವುದು. ಮಧ್ಯಾಹ್ನ 3.30ರಿಂದ ಕುಸ್ತಿ ಪಂದ್ಯಾಟ ಆರಂಭವಾಗಲಿದೆ. ಜ. 10ರಂದು ಸಂಜೆ 3.30ಕ್ಕೆ ಎಲ್ಲಾ ವಿಭಾಗದದ ಫೈನಲ್ ಪಂದ್ಯಾಟ ಹಾಗೂ ಮೂರನೆ ಸ್ಥಾನಕ್ಕೆ ನಡೆಯುವ ಕುಸ್ತಿ ಪಂದ್ಯಾಟ ನಡೆಯಲಿದೆ ಎಂದು ಕರ್ನಾಟಕ ಬೀಚ್ ರೆಸ್ಲಿಂಗ್ ಸಮಿತಿಯ ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿ ತಿಳಿಸಿದರು.

ಗೋಷ್ಟಿಯಲ್ಲಿ ನವೀನ್ ಹೆಗ್ಡೆ, ರಿತೇಶ್, ಮುಹಮ್ಮದ್, ಅರವಿಂದ್, ಕರುಣಾಕರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News