×
Ad

ಹರೇಕಳ: ಶಾಲಾ ಆವರಣ ಗೋಡೆ ಕುಸಿದು ಮೃತಪಟ್ಟ ಬಾಲಕಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ

Update: 2024-05-29 13:46 IST

 ಬಾಲಕಿಯ ಸಾವಿಗೆ ಕಾರಣವಾದ ಹರೇಕಳ ಗ್ರಾಮದ ನ್ಯೂಪಡ್ಪು ಶಾಲೆಯ ಆವರಣ ಗೋಡೆ ಕುಸಿದಿರುವುದು (File photo)

ಕೊಣಾಜೆ, ಮೇ 29: ಕಳೆದ ಕೆಲವು ದಿನಗಳ ಹಿಂದೆ ಕೊಣಾಜೆ ಠಾಣಾ ವ್ಯಾಪ್ತಿಯ ಹರೇಕಳ ಗ್ರಾಮದ ನ್ಯೂಪಡ್ಪು ಶಾಲೆಯ ಆವರಣ ಗೋಡೆ ಕುಸಿದು ಏಳರ ಹರೆಯದ ಬಾಲಕಿಯೋರ್ವಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸರಕಾರವು ಮೃತ ಬಾಲಕಿಯ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡಿದೆ.

ಪದಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಶಾಲೆಯಂದೇ ಗುರುತಿಸಲ್ಪಟ್ಟಿರುವ ಈ ನ್ಯೂಪಡ್ಪು ಶಾಲೆಯಲ್ಲಿ ಶಾಝಿಯಾ ಬಾನು 3ನೇ ತರಗತಿಯಲ್ಲಿ ಕಲಿಯುತ್ತಿದ್ದ ಸಿದ್ದೀಕ್ ಜಮೀಲಾ ದಂಪತಿಯ ಪುತ್ರಿ ಶಾಝಿಯಾ(7) ಮೇ 20ರಂದು ಸಂಜೆ ಶಾಲೆಯ ಗೇಟ್ ಸಮೇತ ಆವರಣ ಗೋಡೆ ಕುಸಿದು ಮೃತಪಟ್ಟಿದ್ದಳು.

ಸ್ಪೀಕರ್ ಯು.ಟಿ.ಖಾದರ್ ಅವರ ಶಿಫಾರಸಿನ ಮೇರೆಗೆ ಸರಕಾರದಿಂದ ಬಾಲಕಿಯ ತಾಯಿಯ ಬ್ಯಾಂಕ್ ಖಾತೆಗೆ ಐದು ಲಕ್ಷ ರೂ. ಪರಿಹಾರಧನ ಜಮೆಯಾಗಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News