ಎಸೆಸೆಲ್ಸಿ ಫಲಿತಾಂಶ| ರಾಜ್ಯಕ್ಕೆ 5ನೇ ಸ್ಥಾನಿಯಾಗಿ ಹೊರಹೊಮ್ಮಿರುವುದು ಸಂತಸ ತಂದಿದೆ: ನಿಹಾಲ್ ಶೆಟ್ಟಿ
Update: 2025-05-02 22:40 IST
ಉಪ್ಪಿನಂಗಡಿ: ನಿರೀಕ್ಷೆಯಂತೆ 621 ಅಂಕ ಬಂದಿದೆ. ಹೆತ್ತವರ ನಿರಂತರ ಪ್ರೋತ್ಸಾಹ , ಶಾಲಾ ಶಿಕ್ಷಕರ ಪ್ರೇರಣೆ, ನನ್ನ ಶ್ರಮದಿಂದ ಪರೀಕ್ಷೆಯನ್ನು ಉತ್ತಮವಾಗಿ ಬರೆಯಲು ಸಾಧ್ಯವಾಯಿತು ನಿಹಾಲ್ ಎಚ್ ಶೆಟ್ಟಿ ಹೇಳಿದ್ದಾರೆ.
ಜನವರಿ ತಿಂಗಳಿಗೆ ಎಲ್ಲಾ ಪಠ್ಯಗಳ ಭೋಧನೆಯನ್ನು ಶಿಕ್ಷಕರು ಪೂರ್ಣಗೊಳಿಸಿದ್ದು, ಆ ಬಳಿಕ ಸತತ ಪುನರಾವರ್ತನೆ, ಹಿಂದಿನ ಪ್ರಶ್ನಾಪತ್ರಿಕೆಗಳ ಬಗ್ಗೆ ನಿಗಾ ಇದೆಲ್ಲವೂ ನನ್ನ ಈ ಅಂಕ ಗಳಿಕೆಗೆ ಸಹಕಾರಿ ಯಾಯಿತು. ನನಗೆ ರಾತ್ರಿ ಹೊತ್ತು ಓದುವುದು ಹಿತಕಾರಿ. ಹೀಗಾಗಿ ನಾನು ರಾತ್ರಿ ಹೊತ್ತು ಹೆಚ್ಚು ಓದು ತ್ತಿದೆ. ಇದು ನನ್ನ ಸಹಜ ಓದಿನ ಪ್ರಕ್ರಿಯೆಯಾಗಿತ್ತು . ವೈದ್ಯಕೀಯ ಕ್ಷೇತ್ರದತ್ತ ನನ್ನ ಮುಂದಿನ ಆಸಕ್ತಿ ಎಂದು ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿ ಉಪ್ಪಿನಂಗಡಿಯ ಹರೀಶ್ ಶೆಟ್ಟಿ ಶೀಲಾವತಿ ದಂಪತಿಯ ಮಗನಾದ ನಿಹಾಲ್ ಶೆಟ್ಟಿ ನೀಡಿದ ಪ್ರತಿಕ್ರಿಯೆ.