×
Ad

ಮಂಜನಾಡಿ ಉರೂಸ್‌ಗೆ ಹಿಂದೂಗಳಿಂದ ಹೊರೆಕಾಣಿಕೆ

Update: 2025-12-27 00:14 IST

ಮಂಜನಾಡಿ: ನಿತ್ಯಾನಂದ ಸೇವಾ ಸಮಿತಿ ನಿತ್ಯಾನಂದ ನಗರ, ಹನುಮಾನ್ ಫ್ರೆಂಡ್ಸ್ ಹಿಂದೂಪುರ ಅಸೈಗೋಳಿ, ಟೀಮ್ ಅಸೈಗೋಳಿ, ಶಕ್ತಿ ಫ್ರೆಂಡ್ಸ್ ಆಕಾಶಭವನ ಮಂಗಳೂರು, ಸ್ನೇಹ ಬಳಗ ಮಂಗಳೂರು, ಓಂ ಶಕ್ತಿ ಮಂಗಳೂರು, ಬರ್ಕೆ ಫ್ರೆಂಡ್ಸ್ ಕುದ್ರೋಳಿ, ಬ್ರದರ್ಸ್‌ ಕೊಲ್ಯ, ಸಾಯಿ ಫ್ರೆಂಡ್ಸ್ ಅಸೈಗೋಳಿ ಆಶ್ರಯದಲ್ಲಿ ಮಂಜನಾಡಿ ಉರೂಸ್‌ಗೆ ಅಸೈಗೋಳಿ ಜಂಕ್ಷನ್‌ನಿಂದ ಮಂಜನಾಡಿ ಕೇಂದ್ರ ಮಸೀದಿ ತನಕ ಗುರುವಾರ ರಾತ್ರಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಸಾಯಿ ಫ್ರೆಂಡ್ಸ್ ಅಸೈಗೋಳಿ ಅಧ್ಯಕ್ಷ ಸುನೀಲ್ ಪೂಜಾರಿ ಮಾತನಾಡಿ, ನಾವೆಲ್ಲರೂ ಒಂದಾಗಿ ಸೌಹಾರ್ದದಂದ ಇರಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡಿದ್ದೇವೆ. ಈ ಉರೂಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಾವು ಜತೆಯಾಗಿ ಶ್ರಮಿಸೋಣ ಎಂದರು.

ಗಣೇಶ್ ಅಸೈಗೋಳಿ ಮಾತನಾಡಿ, ಮಂಜನಾಡಿ ಉರೂಸ್ ಕಾರ್ಯಕ್ರಮಕ್ಕೆ ನಾವು ಹೊರೆಕಾಣಿಕೆಯನ್ನು ನೀಡಿದ್ದೇವೆ. ದೇವರು ನಮ್ಮನ್ನು ಹೀಗೆಯೇ ಸೌಹಾರ್ದದಿಂದ ಮುಂದುವರಿಯಲು ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.

ಮಂಜನಾಡಿ ಜುಮಾ ಮಸೀದಿಯ ಅಧ್ಯಕ್ಷ ಮೈಸೂರು ಬಾವ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಪರ್ತಿಪ್ಪಾಡಿ ಹೊರೆ ಕಾಣಿಕೆ ಸ್ವೀಕಾರ ಮಾಡಿದರು.

ಈ ಸಂದರ್ಭದಲ್ಲಿ ಪ್ರದೀಪ್ ಅಸೈಗೋಳಿ, ಶ್ರೀಕಾಂತ್, ಅಶ್ರಫ್, ಶೌಕತ್ ಅಲಿ ಅಸೈಗೋಳಿ, ಪ್ರವೀಣ್ ಮುನ್ನ, ಹರೀಶ್ ಪೂಜಾರಿ, ಕೆ.ಮಂಜುನಾಥ್, ವಿಕ್ಕಿ ಪೂಜಾರಿ ಮಂಗಳೂರು, ನಾಗರಾಜ್ ಶೆಟ್ಟಿ ಮಾಣಿ, ಪ್ರೀತಂ ಶೆಟ್ಟಿ ಆಲಾಡಿ, ಇಕ್ಬಾಲ್ ಬರುವ ಮತ್ತಿತರರು ಉಪಸ್ಥಿತರಿದ್ದರು.

ಡಿ.27 ಉರೂಸ್ ಸಮಾರೋಪ

ಡಿ.17ರಂದು ಆರಂಭಗೊಂಡ ಮಂಜನಾಡಿ ಉರೂಸ್‌ನ ಸಮಾರೋಪ ಸಮಾರಂಭ ಡಿ.27ರಂದು ನಡೆಯಲಿದೆ.

ಶನಿವಾರ ಮಗ್ರಿಬ್ ನಮಾಝ್ ಬಳಿಕ ಭಾವೈಕ್ಯ ಸಂಗಮ, ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಅಸ್ಸೈಯದ್ ಇಬ್ರಾಹೀಂ ಖಲೀಲ್ ತಂಳ್ ಕಡಲುಂಡಿ, ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News