×
Ad

ಮಂಗಳೂರು| ಎಂಡಿಎಂಎ ಮಾರಾಟಕ್ಕೆ ಯತ್ನ: 6 ಮಂದಿ ಆರೋಪಿಗಳ ಬಂಧನ

Update: 2025-02-10 21:35 IST

ಮಂಗಳೂರು, ಫೆ.10: ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ 6 ಮಂದಿಯನ್ನು ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಾಂಡೇಶ್ವರ ಗ್ರೀನ್‌ಲ್ಯಾಂಡ್ ಲೇಔಟ್ ನಿವಾಸಿ ಧನಿಶ್ ಡಿ. ಕಾಂಚನ್ (19), ಪಾಂಡೇಶ್ವರ ನಿವಾಸಿ ಪೃಥ್ವಿಕ್ (18), ಬಾವುಟಗುಡ್ಡ ನಿವಾಸಿ ಫೈಜ್ ಅಂಬರ್ (23), ಜಲ್ಲಿಗುಡ್ಡೆ ನಿವಾಸಿ ತುಷಾನ್ ಡಿ. ಸುವರ್ಣ (19), ಫಳ್ನೀರ್ ನಿವಾಸಿ ರಾಜಿನ್ (21), ಫಳ್ನೀರ್ ಸ್ಟರಕ್ ರೋಡ್ ನಿವಾಸಿ ಅಫ್ಘಾನ್ (20) ಬಂಧಿತ ಆರೋಪಿಗಳಾಗಿದ್ದಾರೆ.

ಫೆ.8ರಂದು ಸಂಜೆ 5:30ಕ್ಕೆ ಫಳ್ನೀರ್ ರಸ್ತೆಯ ಸಾರ್ವಜನಿಕ ರಸ್ತೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನದಲ್ಲಿ 6 ಮಂದಿ ಯುವಕರು ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿಯ ಮೇರೆಗೆ ಬಂದರು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಪರಾರಿಯಾಗಳು ಯತ್ನಿಸಿದಾಗ ವಾಹನವನ್ನು ಅಡ್ಡಗಟ್ಟಿ ಆರೋಪಿಗಳನ್ನು ಬಂಧಿಸಿ 20.52ಗ್ರಾಂ ಎಂಡಿಎಂಎ ಸಹಿತ ಲಕ್ಷಾಂತರ ರೂ. ಮೌಲ್ಯದ ವಸ್ತುಗಳಲ್ಲದೆ ಕೃತ್ಯಕ್ಕೆ ಬಳಸಿದ್ದ ಕಾರು, ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News