×
Ad

ಚೆನ್ನೈಯಲ್ಲಿ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾಟ: ಮೂಡುಬಿದಿರೆಯ ಶೋರಿನ್ ರಿಯೂ ಕರಾಟೆ ಸಂಸ್ಥೆಗೆ 7 ಚಿನ್ನ, 1 ಕಂಚಿನ ಪದಕ

Update: 2024-02-21 20:37 IST

ಮಂಗಳೂರು: ತಮಿನಾಡಿನ ಚೆನ್ನೈಯಲ್ಲಿ ಫೆ.18 ರಂದು ವರ್ಲ್ಡ್ ಕರಾಟೆ ಮಾಸ್ಟರ್ ಅಸೋಸಿಯೇಶನ್ ಆಯೋಜಿಸಿದ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾಟದಲ್ಲಿ ಮೂಡುಬಿದಿರೆಯ ಶೋರಿನ್ ರಿಯೂ ಕರಾಟೆ ಸಂಸ್ಥೆಯು 7 ಚಿನ್ನ, 1 ಕಂಚಿನ ಪದಕ ಪಡೆಯುವುದರೊಂದಿಗೆ ಉತ್ತಮ ತಂಡ ಪ್ರಶಸ್ತಿಯನ್ನು ಪಡೆಯಿತು.

ಪ್ರಶಸ್ತಿಯ ವಿವರ

ಮೊಹಮ್ಮದ್ ನಹ್ಯಾನ್ ಅಬೂಬಕ್ಕರ್ - ಕಟ ಹಾಗೂ ಕುಮಿತೆ ವಿಭಾಗದಲ್ಲಿ ಚಿನ್ನದ ಪದಕ

ಇಳಾಫ ಅಬ್ದುಲ್ ಖಾದರ್ - ಕಟ ಹಾಗೂ ಕುಮಿತೆ ವಿಭಾಗದಲ್ಲಿ ಚಿನ್ನದ ಪದಕ

ಮೊಹಮ್ಮದ್ ಇಯಾದ್ ಇಬ್ರಾಹಿಂ - ಕಟ ಹಾಗೂ ಕುಮಿತೆ ವಿಭಾಗದಲ್ಲಿ ಚಿನ್ನದ ಪದಕ

ಮೊಹಮ್ಮದ್ ಮೀರಶ್ - ಕುಮಿತೆ ವಿಭಾಗದಲ್ಲಿ ಚಿನ್ನದ ಪದಕ, ಕಟ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಇವರೆಲ್ಲರೂ ರೆನ್ಶಿ ಮುಹಮ್ಮದ್ ನದೀಮ್ ರವರೊಂದಿಗೆ ತರಬೇತಿಯನ್ನು ಪಡೆಯುತ್ತಿದ್ದಾರೆ. ಇವರೆಲ್ಲರನ್ನು ಸಂಸ್ಥೆಯ ಅಧ್ಯಕ್ಷರಾದ ಅಬುಲ್ ಆಲ ಅವರು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News