ಫಾಳಿಲಾ - ಫಾಳೀಲಾ ವಿಮೆನ್ಸ್ ಕಾಲೇಜ್ ಫಲಿತಾಂಶ ಪ್ರಕಟ: ಶೇ. 83.61 ವಿದ್ಯಾರ್ಥಿನಿಯರು ತೇರ್ಗಡೆ; ಕರ್ನಾಟಕ ಪ್ರಥಮ
ಕಲ್ಲಿಕೋಟೆ : 'ಸಮಸ್ತದ ಅಧೀನದ ಫಾಳಿಲಾ-ಫಳೀಲಾ ವಿಮೆನ್ಸ್ ಕಾಲೇಜ್ ಗಳ ಈವನ್ ಸೆಮಿಸ್ಟರ್ ಪರೀಕ್ಷೆ ಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಒಟ್ಟಾರೆ ಶೇ. 83.61 ರಷ್ಟು ವಿದ್ಯಾರ್ಥಿನಿಯರು ತೇರ್ಗಡೆ ಗೊಂಡಿದ್ದು, ಕರ್ನಾಟಕ ಶೇ.88.14 ಫಲಿತಾಂಶ ದೊಂದಿಗೆ ಪ್ರಥಮ ಸ್ಥಾನವನ್ನು ಪಡೆದರೆ, ಶೇ.80.53 ತೇರ್ಗಡೆ ಯೊಂದಿಗೆ ಕೇರಳ ದ್ವಿತೀಯ ಸ್ಥಾನವನ್ನು ಪಡಕೊಂಡಿದೆ.
ಫಾಳಿಲಾ ವಿಭಾಗದಲ್ಲಿ ಒಟ್ಟಾರೆಯಾಗಿ ಶೇ.80.90 ತೇರ್ಗಡೆಯಾದರೆ, ಅದರಲ್ಲಿ ಕರ್ನಾಟಕ ಶೇ.89.95, ಹಾಗೂ ಕೇರಳ ಶೇ.80.53 ತೇರ್ಗಡೆ ಹೊಂದಿದೆ.
ಫಳೀಲಾ ವಿಭಾಗದಲ್ಲಿ ಒಟ್ಟಾರೆ ಫಲಿತಾಂಶ ಶೇ.86.33 ದಾಖಲಾದರೆ ಅದರಲ್ಲಿ ಕರ್ನಾಟಕ ಶೇ. 86.33 ಪಡೆದರೆ ಕೇರಳ ಶೇ.86.25 ತೇರ್ಗಡೆ ಹೊಂದಿರುತ್ತದೆ.
ಟಾಪ್ ಸ್ಟಾರ್ 19 ವಿದ್ಯಾರ್ಥಿನಿರು ,ಡಿಸ್ಟಿಂಕ್ಷನ್ 158 ಹಾಗೂ ಪ್ರಥಮ ಶ್ರೇಣಿಯಲ್ಲಿ 208 ವಿದ್ಯಾರ್ಥಿ ನಿಯರು ಉತ್ತೀರ್ಣರಾಗಿದ್ದಾರೆ. ಎಪ್ರಿಲ್ 21 ರಿಂದ 25 ರ ವರೆಗೆ ಕೇರಳ ,ಕರ್ನಾಟಕದ ಸುಮಾರು 91 ಪರೀಕ್ಷಾ ಕೇಂದ್ರಗಳಲ್ಲಿ ಮೂರು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು ಕರ್ನಾಟಕದಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು ಆರು ನೂರು ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು.