×
Ad

ಕೃಷ್ಣಾಪುರ: ಅಲ್ ಬದ್ರಿಯಾ ಸ್ಕೂಲ್ ನಲ್ಲಿ NEET/JEE ತರಬೇತಿ ಕಾರ್ಯಕ್ರಮ

Update: 2024-01-02 18:57 IST

ಕೃಷ್ಣಾಪುರ: ಅಲ್ ಬದ್ರಿಯಾ ಸ್ಕೂಲ್ ಕೃಷ್ಣಾಪುರ ಮತ್ತು MEIF (ದ.ಕ & ಉಡುಪಿ ಜಿಲ್ಲೆ) ಜಂಟಿ ನೇತೃತ್ವದಲ್ಲಿ ಡಿ.2ರಂದು ನಡೆದ NEET/JEE ತರಬೇತಿ ಕಾರ್ಯಕ್ರಮದಲ್ಲಿ ಅಲ್ ಬದ್ರಿಯಾ ಸ್ಕೂಲ್ ಸಂಚಾಲಕರಾದ ಬಿ. ಎ. ನಝೀರ್ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಿ. ಎ. ಇಕ್ಬಾಲ್ (convenor, ಮೀಫ್) ಅವರು NEET /JEE EXAM ನ ಪ್ರಾಮುಖ್ಯತೆಯನ್ನು ವಿವರಿಸಿದರು.

ಇಂದಿನ ಕ್ರಾಯಕ್ರಮದ ಸಂಪನ್ಮೂಲ ವ್ಯಕ್ತಿ ಸಿನಾನ್ ಝಕರಿಯ (ಡೈರೆಕ್ಟರ್ YCAL Bahrain) ರವರು NEET /JEE EXAM ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಅತಿಥಿಯಾಗಿ ಕತರ್ ಅಬ್ದುಲ್ಲಾ ಮೋನು ಹಾಗೂ ವೇದಿಕೆಯಲ್ಲಿ ಮೀಫ್ ಉಪಾಧ್ಯಕ್ಷರಾದ ಮುಮ್ತಾಝ್ ಅಲಿ, ಮೀಫ್ ಕನ್ವೀನರ್ ಶಹಾಮ್, ಅಲ್ ಫುರ್ಖಾನ್ ಮತ್ತು ಅಲ್ ಬದ್ರಿಯಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಅಬೂಬಕ್ಕರ್ ಕೃಷ್ಣಾಪುರ ಉಪಸ್ಥಿತರಿದ್ದರು.

ಈ ತರಬೇತಿ ಕಾರ್ಯಗಾರದಲ್ಲಿ ಕೃಷ್ಣಾಪುರದ ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ, ಚೊಕ್ಕಬೆಟ್ಟು ಪ್ರೀಚ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಮುಕ್ಕ ಅಂಜುಮಾನ್ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ಒಟ್ಟು 140 ವಿದ್ಯಾರ್ಥಿಗಳು ಹಾಜರಿದ್ದರು. ಪ್ರಾಂಶುಪಾಲರಾದ ದೀಪ ಬಿ. ಸ್ವಾಗತಿಸಿ, ಶಿಕ್ಷಕಿ ಮುಬೀನ ವಂದಿಸಿದರು. ಶಿಕ್ಷಕಿ ಸಾಮಿಯಾ ಕಾರ್ಯಕ್ರಮ ನಿರೂಪಿಸಿದರು.






Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News