×
Ad

ರಾಣಿ ಅಬ್ಬಕ್ಕ ತುಳುವರ ಸ್ವಾಭಿಮಾನಕ್ಕೆ ಸಂಕೇತ: ಭಾಸ್ಕರ ರೈ ಕುಕ್ಕುವಳ್ಳಿ

Update: 2025-11-17 23:57 IST

ಬಂಟ್ವಾಳ: ತುಳುನಾಡನ್ನು ಆಳಿದ 26 ಪ್ರಮುಖ ಜೈನ ರಾಜ-ರಾಣಿಯರಲ್ಲಿ 12ನೆಯವಳಾದ ಅಬ್ಬಕ್ಕ ಉಳ್ಳಾಲದಲ್ಲಿ ಸ್ವತಂತ್ರ ರಾಜಸತ್ತೆಯನ್ನು ನಡೆಸಿದವಳು. ಧರ್ಮ ನಿರಪೇಕ್ಷ ಆಡಳಿತ, ರಾಜಕೀಯ ನೈಪುಣ್ಯ, ಯುದ್ಧ ತಂತ್ರ ಮತ್ತು ಸ್ವಾತಂತ್ರ್ಯಪ್ರಿಯತೆಯ ಮೂಲಕ ರಾಷ್ಟ್ರದ ಗಮನಸೆಳೆದಿದ್ದ ಅವಳು ಪರಕೀಯ ಪೋರ್ಚುಗೀಸರಿಗೆ ಸಿಂಹ ಸ್ವಪ್ನವಾಗಿದ್ದಳು. ತುಳುನಾಡಿಗರ ಸ್ವಾಭಿಮಾನದ ಸಂಕೇತವಾಗಿದ್ದ ಅಬ್ಬಕ್ಕ ರಾಣಿ ವಿದೇಶೀ ಶಕ್ತಿಗಳಿಗೆ ತಲೆಬಾಗದೆ ನಾಡ ರಕ್ಷಣೆಗಾಗಿ ಆತ್ಮಾರ್ಪಣೆ ಮಾಡಿದ ದಿಟ್ಟ ಮಹಿಳೆ ಎಂದು ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಭಾಸ್ಕರ ರೈ ಕುಕುವಳ್ಳಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಮತ್ತು ಕೆನರಾ ಇಂಜಿನಿಯರಿಂಗ್ ಕಾಲೇಜು (ಸ್ವಾಯತ್ತ) ಬಂಟ್ವಾಳ ಬೆಂಜನಪದವು ಸಹಯೋಗದಲ್ಲಿ ಅಬ್ಬಕ್ಕ 500 ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಸೆಮಿನಾರ್ ಹಾಲಿನಲ್ಲಿ ನಡೆದ 85ನೇ ಎಸಳಿನ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಉಪನ್ಯಾಸ ನೀಡಿದರು.

ಪ್ರಾಧ್ಯಾಪಕ ಡಾ.ವಾದಿರಾಜ ಗೋಪಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆನರಾ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ನಾಗೇಶ್ ಎಚ್.ಆರ್. ಅಧ್ಯಕ್ಷತೆ ವಹಿಸಿದ್ದರು. ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಪರೀಕ್ಷಾ ನಿಯಂತ್ರಕ ಡೀನ್ ಡಾ. ಉದಯಕುಮಾರ್ ಕೆ. ಶೆಣೈ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಡಾ. ಮಾಧವ ಎಂ.ಕೆ. ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಲಕ್ಷ್ಮಿ ಹೆಗ್ಡೆ ಪ್ರಾರ್ಥನೆ ಹಾಡಿದರು. ವಾಣಿ ಯು.ಎಚ್. ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಸತೀಶ್ ಹೆಗ್ಡೆ ವಂದಿಸಿದರು. ಶಿಲ್ಪಾಬಿ. ಸಹಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News