×
Ad

ಫೆ.7: ’ಸಮಸ್ತ ಆದರ್ಶ ಹಾದಿಯ ನೆರಳು ವೃಕ್ಷಗಳು’ಗ್ರಂಥ ಬಿಡುಗಡೆ

Update: 2026-02-03 19:20 IST

ಮಂಗಳೂರು, ಫೆ.3: 1926ರಿಂದ 2026 ತನಕ ಸಮಸ್ತಕ್ಕೆ ನೇತೃತ್ವ ವಹಿಸಿದ ನಾಯಕರ ಬಗ್ಗೆ, ಸಮಸ್ತದ ಉಗಮ, ಇತಿಹಾಸ, ಬೆಳವಣಿಗೆ, ಮುಶಾವರ ಸದಸ್ಯರ ವಿವರಣೆ, ಪ್ರಮುಖ ತೀರ್ಮಾನಗಳು, ಹಾಲಿ ಮುಶಾವರ ಸದಸ್ಯರ ಪರಿಚಯ, ವಿವಿಧ ಪೋಷಕ ಸಂಘಟನೆಗಳ ಇತಿಹಾಸ ಇತ್ಯಾದಿ ವಿಷಯಗಳನ್ನು ಒಳಗೊಂಡ 1000 ಪುಟಗಳ ’ಸಮಸ್ತ ಆದರ್ಶ ಹಾದಿಯ ನೆರಳು ವೃಕ್ಷಗಳು’ಗ್ರಂಥದ ಬಿಡುಗಡೆ ಕಾರ್ಯಕ್ರಮವು ಫೆ.7ರಂದು ಸಮಸ್ತ ಶತಮಾನೋತ್ಸವ ಸಮ್ಮೇಳನದ ವೇದಿಕೆಯಲ್ಲಿ ನಡೆಯಲಿದೆ.

ಮಲ್ಲೂರಿನ ಉದ್ದಬೆಟ್ಟು ನಿವಾಸಿ, ದಾರುಸ್ಸಲಾಂ ವಿದ್ಯಾರ್ಥಿ ಶವಿಲ್ ಅತೀ ಸಣ್ಣ ವಯಸ್ಸಿನಲ್ಲೇ ಇಂತಹದ್ದೊಂದು ಸಾಧನೆ ಮಾಡಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಪುಸ್ತಕ ರಚನೆಗಾಗಿ ಶ್ರಮಿಸಿದ್ದ ಶವಿಲ್ ಕಲಿಕೆಯ ಬಿಡುವಿನ ಅವಧಿಯಲ್ಲಿ ಅನೇಕ ಧಾರ್ಮಿಕ ಪುಸ್ತಕಗಳನ್ನು ಅಭ್ಯಸಿಸಿ ಈ ಬೃಹತ್ ಗ್ರಂಥ ರಚಿಸಿದ್ದಾರೆ. ದಾರುಸ್ಸಲಾಂ ಅಲ್ ಬಯಾನ್ ಸಮಿತಿ ಪ್ರಕಟಿಸಿರುವ ಈ ಗ್ರಂಥವನ್ನು ಸಮಸ್ತ ಅಧ್ಯಕ್ಷ ಜಿಫ್ರಿ ಮುತ್ತುಕೋಯ ತಂಙಳ್ ಬಿಡುಗಡೆಗೊಳಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News