ಮಾದಕ ವಸ್ತು ಸೇವನೆ ಆರೋಪ: ನಾಲ್ವರ ಬಂಧನ
Update: 2026-02-03 19:21 IST
ಮಂಗಳೂರು, ಫೆ.3: ಸಾರ್ವಜನಿಕ ಸ್ಥಳದಲ್ಲಿ ಮಾದಕ ಸೇವನೆ ಮಾಡಿದ ಆರೋಪದಲ್ಲಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ.
ಫೆ.2ರಂದು ಕಾವೂರು ಜಂಕ್ಷನ್ ಹತ್ತಿರ ಪಂಜಿಮೊಗರು ಉರುಂದಾಡಿ ಕ್ರಾಸ್ ನಿವಾಸಿ ಶೈಲೇಶ್ (39) ಮತ್ತು ನಗರದ ಮರಕಡ ಜಂಕ್ಷನ್ ಬಳಿ ಯೆಯ್ಯಾಡಿ ಪದವು ನಿವಾಸಿ ವಿನ್ಯಾಸ್ (18) ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಕೂಳೂರು ಸಾರ್ವಜನಿಕ ಸ್ಥಳದಲ್ಲಿ ಪುಲೇಶ್ವರ ಭೂಯಿಯಾನ್ (22) ಮತ್ತು ನಗರದ ಕೆ.ಎಸ್.ರಾವ್ ರೋಡ್ ಸಮೀಪ ಕದ್ರಿ ಮುಂಡನ ಕ್ರಾಸ್ ರಸ್ತೆ ನಿವಾಸಿ ಚಂದನ್ ಸಿ. (26) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.