ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಬಾಲಕಿಯರು ಚಾಂಪಿಯನ್, ಬಾಲಕರು ರನ್ನರ್‌ಅಪ್
Update: 2026-02-03 19:00 IST
ಮೂಡುಬಿದಿರೆ: ತಮಿಳುನಾಡಿನ ಈರೋಡಿನಲ್ಲಿ ನಡೆದ 70ನೇ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್‌ನಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ಬಾಲಕಿಯರ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಬಾಲಕರ ತಂಡ ರನ್ನರ್‌ಅಪ್ ಪ್ರಶಸ್ತಿ ಪಡೆಯಿತು.
ಕರ್ನಾಟಕ ತಂಡದಲ್ಲಿ ಬಾಲಕಿಯರ ವಿಭಾಗದಲ್ಲಿ ಆರು ಮಂದಿ ಹಾಗೂ ಬಾಲಕರ ವಿಭಾಗದಲ್ಲಿ ನಾಲ್ಕು ಮಂದಿ ಆಳ್ವಾಸ್ ಕ್ರೀಡಾಪಟುಗಳು ಪಾಲ್ಗೊಂಡು ರಾಜ್ಯದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ವಿಜೇತ ಕರ್ನಾಟಕ ತಂಡದ ಪರವಾಗಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಚರಣ್ ಹಾಗೂ ಬಾಲಕಿಯರ ತಂಡದಲ್ಲಿ ರಾಜ್ಯ ತಂಡದ ನಾಯಕಿಯಾಗಿದ್ದ ಆಳ್ವಾಸ್‌ನ ಗೀತಾ ಮತ್ತು ಶುಭಶ್ರೀ ಅವರಿಗೆ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ಲಭಿಸಿತು.
ಸಾಧಕ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.