×
Ad

ಅ.12: ಪಾಲ್ದನೆ ಚರ್ಚ್ ನಲ್ಲಿ ವಾರ್ಷಿಕ ಹಬ್ಬ

Update: 2025-10-08 20:42 IST

ಮಂಗಳೂರು: ಪಾಲ್ದನೆ ಸಂತ ತೆರೆಸಾ ಚರ್ಚಿನಲ್ಲಿ ವಾರ್ಷಿಕ ಹಬ್ಬ (ಸಾಂತ್ ಮಾರಿ) ವನ್ನು ಅ, 12 ರಂದು ಆಚರಣೆ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ಧರ್ಮ ಪ್ರಾಂತ್ಯದ ವಿಶ್ರಾಂತ ಬಿಷಪ್ ಅತಿ ವಂ.ಡಾ. ಅಲೋಷಿಯಸ್ ಪಾವ್ಲ್ ಡಿ' ಸೋಜಾ ಅವರು ಬಲಿ ಪೂಜೆಯ ನೇತೃತ್ವ ವಹಿಸಿ ಸಮಸ್ತ ಭಕ್ತರನ್ನು ಆಶೀರ್ವದಿಸುವರು.

ಪಾಲ್ದನೆ ಚರ್ಚ್ ಧರ್ಮ ಗುರು ವಂ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಮತ್ತು ಮಂಗಳೂರು ಧರ್ಮ ಪ್ರಾಂತ್ಯದ ಸಿಟಿ ವಲಯದ ವ್ಯಾಪ್ತಿಯ 12 ಚರ್ಚ್ ಗಳ ಧರ್ಮ ಗುರುಗಳು ಬಲಿ ಪೂಜೆಯಲ್ಲಿ ಭಾಗವಹಿಸಲಿದ್ದಾರೆ.

ಅದೇ ದಿನ ಐ ಸಿ ವೈ ಎಂ ಸದಸ್ಯರು 'ನಶೀಬಚೊ ಖೆಳ್‌' ಎಂಬ ಮನೋರಂಜನಾ ಕಾರ್ಯಕ್ರಮ ಮತ್ತು ಗೇಮ್ಸ್ ಗಳನ್ನು ನಡೆಸುವರು. ಅಲ್ಲದೆ ಸ್ಟಾಲ್ ಗಳ ವ್ಯವಸ್ಥೆಯನ್ನು ಮಾಡಲಿದ್ದಾರೆ. ಸಂಜೆ 'ತಾಲೆಂತಾಚೊ ಸಂಭ್ರಮ್' ಎಂಬ ಕಾರ್ಯಕ್ರಮವಿದ್ದು, ಅದರಲ್ಲಿ ಚರ್ಚಿನ ಸದಸ್ಯರಿಗೆ ವಿವಿಧ ಸ್ಪರ್ಧೆಗಳು, ಫುಡ್ ಫೆಸ್ಟಿವಲ್, ಪ್ರಸಿದ್ಧ ಗಾಯಕರಿಂದ ಸಂಗೀತ ಕಾರ್ಯಕ್ರಮ ಇರಲಿದೆ ಎಂದು ಚರ್ಚಿನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News