ಫೆ.13: ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ
ಮಂಗಳೂರು, ಫೆ.11: ನಗರದ ನೆಹರೂ ಮೈದಾನದ ಉಪಕೇಂದ್ರದಿಂದ ಹೊರಡುವ ಮಾರ್ಕೆಟ್ ಫೀಡರ್ ವ್ಯಾಪ್ತಿಯಲ್ಲಿ ಮತ್ತು ಅತ್ತಾವರ ಉಪಕೇಂದ್ರದಿಂದ ಹೊರಡುವ ವೈದ್ಯನಾಥನಗರ ಫೀಡರ್ ಮತ್ತು ಕಂಕನಾಡಿ ಉಪಕೇಂದ್ರದಿಂದ ಹೊರಡುವ ಫಳ್ನೀರ್ ಫೀಡರ್ ವ್ಯಾಪ್ತಿಯಲ್ಲಿ ಹಾಗೂ ಅತ್ತಾವರ ಉಪಕೇಂದ್ರದಿಂದ ಹೊರಡುವ ಮುತ್ತಪ್ಪ ಟೆಂಪಲ್ ಫೀಡರ್ ವ್ಯಾಪ್ತಿಯಲ್ಲಿ ಮತ್ತು ಜೆಪ್ಪು ಉಪ ಕೇಂದ್ರದಿಂದ ಹೊರಡುವ ಗೋರಿಗುಡ್ಡ ಫೀಡರ್ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ನಡೆಯಲಿರುವುದರಿಂದ ಫೆ.13ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ.
*ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸೆಂಟ್ರಲ್ ಮಾರ್ಕೆಟ್, ಜಿಎಚ್‌ಎಸ್ ರೋಡ್, ಕ್ಲಾಕ್ ಟವರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
*ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಅತ್ತಾವರ ಕಟ್ಟೆ, ಮೆಸ್ಕಾಂ ಆಫೀಸ್, ವೈದ್ಯನಾಥ ನಗರ, ಅತ್ತಾವರ 5ನೇ ಕ್ರಾಸ್, ಕಂಕನಾಡಿ ಮಾರ್ಕೆಟ್, ಹೈಲ್ಯಾಂಡ್, ಯುನಿಟಿ ಹಾಸ್ಪಿಟಲ್, ಸೈಂಟ್ ಮೆರೀಸ್ ಸ್ಕೂಲ್, ವಾಸ್‌ಲೇನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
*ಅಂದು ಬೆಳಗ್ಗೆ 10ರಿಂದ ಸಂಜೆ 4 ರವರೆಗೆ ಮಿಲಾಗ್ರಿಸ್, ಹಂಪನಕಟ್ಟ, ಮಾಂಡೋವಿ ಮೋಟರ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
*ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಗೋರಿಗುಡ್ಡ, ಗೋರಿಗುಡ್ಡ, ನಾಗಬನ, ಗುರುಪ್ರಸಾದ್ ಲೇನ್, ಕೇಂದ್ರಿಯ ವಿದ್ಯಾಲಯ, ಅಂಗಡಿ ಮಾರ್, ರಿಲಾಯನ್ಸ್, ಗುರುಪ್ರಸಾದ್, ಉಜ್ಜೋಡಿ, ಮಾರುತಿಗ್ಯಾರೇಜ್, ಸಿಟಿ ಗೇಟ್, ವಿಶ್ವಾಸ್ ಗ್ರೀನ್ ವ್ಯೆ, ಎಕ್ಕೂರು ಗುಡ್ಡ, ಅಯ್ಯಪ್ಪಭಜನಾ ಮಂದಿರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.