ಜು.13: ಸಾರಿಗೆ ಸಚಿವರು ದ.ಕ.ಜಿಲ್ಲೆಗೆ ಭೇಟಿ
Update: 2025-07-10 19:54 IST
ಮಂಗಳೂರು, ಜು.10: ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಜು.13ರಂದು ದ.ಕ.ಜಿಲ್ಲೆಗೆ ಆಗಮಿಸಲಿದ್ದಾರೆ.
ಅಂದು ಬೆಳಗ್ಗೆ 6:55 ಮಂಗಳೂರಿಗೆ ಆಗಮಿಸಿ ನಂತರ ಉಡುಪಿಗೆ ತೆರಳಲಿದ್ದಾರೆ. ಮಧ್ಯಾಹ್ನ 12ಕ್ಕೆ ನಗರಕ್ಕೆ ಆಗಮಿಸಿ ನೂತನವಾಗಿ ನಿರ್ಮಿಸಿರುವ ಸ್ವಯಂ ಚಾಲಿತ ಚಾಲನಾ ಪಥವನ್ನು ಉದ್ಘಾಟಿಸುವರು. ಅಪರಾಹ್ನ 3:25ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.