ಫೆ.16: ತೊಕ್ಕೊಟ್ಟಿನಲ್ಲಿ ʼಸಾಗರ್ ಸಿಲ್ಕ್ಸ್ ಆ್ಯಂಡ್ ಸಾರೀಸ್ʼನ ನೂತನ ಮಳಿಗೆ ಆರಂಭ
ಮಂಗಳೂರು, ಫೆ.14: ತೊಕ್ಕೊಟ್ಟು ಜಂಕ್ಷನ್‌ನಲ್ಲಿ ʼಸಾಗರ್ ಸಿಲ್ಕ್ಸ್ ಆ್ಯಂಡ್ ಸಾರೀಸ್‌ನ ನೂತನ ಮಳಿಗೆಯು ಫೆ.16ರಂದು ಬೆಳಗ್ಗೆ 9ಕ್ಕೆ ಉದ್ಘಾಟನೆಗೊಳ್ಳಲಿದೆ. ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಎ.ಕೆ.ಎಂ. ಅಶ್ರಫ್, ತೊಕ್ಕೊಟ್ಟು ಸೈಂಟ್ ಸೆಬೆಸ್ಟಿಯನ್ ಚರ್ಚ್‌ನ ಫಾ. ಸಿಪ್ರಿಯಾನ್ ಪಿಂಟೋ, ಉಳ್ಳಾಲ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಹನೀಫ್ ಹಾಜಿ, ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ನಾಯಕ್, ನ್ಯಾಯಾಧೀಶ ಅಬ್ದುಲ್ ಸಲೀಂ, ಉಳ್ಳಾಲ ಠಾಣೆಯ ಇನ್‌ಸ್ಪೆಕ್ಟರ್ ಬಾಲಕೃಷ್ಣ ಎಚ್.ಎನ್., ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಯು.ಟಿ. ಇಫ್ತಿಕಾರ್ ಅಲಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ನಗರಸಭೆಯ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸಪ್ನಾ ಹರೀಶ್, ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಟಿ.ಎಸ್. ಅಬ್ದುಲ್ಲಾ, ಯು.ಬಿ. ಸಲೀಂ, ಚಾರ್ಟಡ್ ಅಕೌಂಟೆಂಟ್ ಅಬ್ದುಲ್ ಸಮದ್, ತೊಕ್ಕೊಟ್ಟು ವರ್ತಕರ ಸಂಘದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಕೌನ್ಸಿಲರ್‌ಗಳಾದ ಬಾಝಿಲ್ ಡಿಸೋಜ, ಅಯ್ಯೂಬ್ ಮಂಚಿಲ, ಸಿಪಿಎಂ ನಾಯಕ ಕೃಷ್ಣಪ್ಪ ಸಾಲ್ಯಾನ್, ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಜಲೀಲ್ ಕೃಷ್ಣಾಪುರ, ಮೆಸ್ಕಾಂ ಎಇಇ ಡಿ. ದಯಾನಂದ, ಕೆಥೊಲಿಕ್ ಸಂಘಟನೆಯ ಮುಖಂಡ ರಾಬರ್ಟ್ ವರ್ಗೀಸ್, ಜೆಡಿಎಸ್ ಮುಖಂಡ ಹೈದರ್ ಪರ್ತಿಪ್ಪಾಡಿ, ಪತ್ರಕರ್ತ ವಿದ್ಯಾಧರ ಶೆಟ್ಟಿ, ಉದ್ಯಮಿ ರಮಾನಾಥ ಎಂ. ಕೋಟ್ಯಾನ್, ಸಿವಿಲ್ ಗುತ್ತಿಗೆದಾರ ಅನಿಲ್ ವರ್ಗಿಸ್ ಭಾಗವಹಿಸಲಿದ್ದಾರೆ.
ಹೊಸ ಮಳಿಗೆಯಲ್ಲಿ ಮದುವೆಯ ಎಲ್ಲಾ ವಸ್ತ್ರಗಳು ಲಭಿಸಲಿದೆ. 10 ಸಾವಿರ ರೂ.ಗಿಂತ ಅಧಿಕ ಮೌಲ್ಯದ ವಸ್ತ್ರಗಳನ್ನು ಖರೀದಿಸಿದರೆ ವಿಶೇಷ ಕೊಡುಗೆ ನೀಡಲಾಗುವುದು. 1985ರಲ್ಲಿ ಆರಂಭಗೊಂಡ ಸಾಗರ್ ಕಂಪೆನಿಯ ಅಧೀನದಲ್ಲಿ ತೊಕ್ಕೊಟ್ಟಿನಲ್ಲಿ ಸಾಗರ್ ಕಲೆಕ್ಷನ್ ಮತ್ತು ಮಂಗಳೂರಿನ ಟೋಕ್ಯೊ ಮಾರ್ಕೆಟ್‌ನಲ್ಲಿ ಸಾಗರ್ ವೆಡ್ಡಿಂಗ್ ಮಳಿಗೆಯು ಕಾರ್ಯಾಚರಿಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.