×
Ad

ಡಿ.16-31: ‘ಸಿಟಿ ಗೋಲ್ಡ್’ನಲ್ಲಿ ‘ಮ್ಯಾಜಿಕ್ ಡೈಮಂಡ್ ಫೆಸ್ಟ್

Update: 2023-12-14 19:10 IST

ಮಂಗಳೂರು, ಡಿ.14: ನಗರದ ಕಂಕನಾಡಿಯಲ್ಲಿರುವ ‘ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್’ ವತಿಯಿಂದ ಡಿ.16ರಿಂದ 31ರ ತನಕ ಮ್ಯಾಜಿಕ್ ಡೈಮಂಡ್ ಫೆಸ್ಟ್ ನಡೆಯಲಿದೆ.

‘ಮ್ಯಾಜಿಕ್ ಡೈಮಂಡ್ ಫೆಸ್ಟ್’ ಕಾರ್ಯಕ್ರಮವನ್ನು ಡಿ.16ರ ಸಂಜೆ 4ಕ್ಕೆ ನಟಿ ಹಾಗು ಗಾಯಕಿ ಮೈತ್ರಿ ಅಯ್ಯರ್ ಉದ್ಘಾಟಿಸಲಿದ್ದಾರೆ.

‘ಡೈಮಂಡ್ ಫೆಸ್ಟ್’ ಪ್ರಯುಕ್ತ ಮಕ್ಕಳ ಡೈಮಂಡ್ ಆಭರಣಗಳ ಸಂಗ್ರಹದ ಹೊಸ ಕೌಂಟರ್ ಮಂಗಳೂರಿನಲ್ಲಿ ಪ್ರಥಮ ಬಾರಿ ತೆರೆಯಲಿದೆ. ಫೆಸ್ಟ್ ಪ್ರಯುಕ್ತ ಡೈಮಂಡ್ ಖರೀದಿಯ ಪ್ರತಿ ಕ್ಯಾರೆಟ್‌ನ ಮೇಲೆ ಶೇ 30ರಷ್ಟು ರಿಯಾಯಿತಿ ದೊರೆಯಲಿದೆ.

ಡೈಮಂಡ್ ಫೆಸ್ಟ್ ಪ್ರಯುಕ್ತ ಗ್ರಾಹಕರು ಯಾವುದೇ ಮಳಿಗೆಯಿಂದ ಖರೀದಿಸಿದ ವಜ್ರಾಭರಣಗಳ ಉಚಿತ ನಿರ್ವಹಣೆ ಮಾಡಿಕೊಡಲಾಗುವುದು. ಯಾವುದೇ ಮಳಿಗೆಗಳಿಂದ ಖರೀದಿಸಿದ ವಜ್ರಾಭರಣಗಳನ್ನು ನಮ್ಮಲ್ಲಿ ಬದಲಾಯಿಸಿ ಕೊಡಲಾ ಗುವುದು, ಚಿನ್ನಾಭರಣ ಖರೀದಿಯಲ್ಲಿನ ಮೇಕಿಂಗ್ ಚಾರ್ಜಸ್ ಮೇಲೆ ಶೇ.55ರಷ್ಟು ರಿಯಾಯಿತಿ ನೀಡಲಾಗುವುದು.

ಪ್ರತಿ ಖರೀದಿಯ ಗ್ರಾಹಕರಿಗೆ ಸಕ್ಯೆಾಚ್ ಆ್ಯಂಡ್ ವಿನ್ ಕೂಪನ್ ವಿತರಿಸಲಾಗುವುದು. ವಿಜೇತರಿಗೆ ಚಿನ್ನದ ನಾಣ್ಯ ಹಾಗು ಇತರೆ ಉಡುಗೊರೆಗಳು ನೀಡಲಾಗುವುದು. ಮದುವೆ ಖರೀದಿಯಲ್ಲಿನ ಪ್ರತಿ ಗ್ರಾಹಕರಿಗೂ ಕೂಪನ್ ವಿತರಿಸಲಾಗುವುದು, ವಿಜೇತ 5 ಜೋಡಿ ನವ ದಂಪತಿಗೆ ಮಲೇಷ್ಯಾ ಪ್ರವಾಸ ಕೈಗೊಳ್ಳುವ ಸದವಕಾಶ ದೊರೆಯಲಿದೆ.

ದೇಶ ವಿದೇಶಗಳಲ್ಲಿ ವೈವಿಧ್ಯಮಯ ರೀತಿಯಲ್ಲಿ ತಯಾರಿಸಲ್ಪಟ್ಟ ವಜ್ರಾಭರಣಗಳು ಪ್ರದರ್ಶನ ಹಾಗು ಮಾರಾಟ ನಡೆಯಲಿದೆ ಎಂದು ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News