×
Ad

ಆ.17: ವಿದೇಶದಲ್ಲಿ ಅಧ್ಯಯನ ಕುರಿತು ಕಾರ್ಯಕ್ರಮ

Update: 2025-08-14 19:26 IST

ಮಂಗಳೂರು,ಆ.14: ರಾಜ್ಯ ಸರಕಾರವು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮ (ಕೆಪಿಟಿಎಸ್‌ಡಿಸಿ) ವತಿಯಿಂದ ಆ.17ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಬೆಂಗಳೂರು ಲಲಿತ್ ಅಶೋಕ್ ಹೋಟೆಲ್‌ನಲ್ಲಿ ವಿದೇಶದಲ್ಲಿ ಅಧ್ಯಯನ-2025 ಬೆಂಗಳೂರು ಎಂಬ ಅಂತಾರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮವು ನಡೆಯಲಿದೆ.

ಪ್ರಥಮ ಬಾರಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ 10ಕ್ಕೂ ಹೆಚ್ಚು ದೇಶಗಳಿಂದ 50ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳನ್ನು ಸಂಪರ್ಕಿಸುವ ಸುವರ್ಣ ಅವಕಾಶವನ್ನು ಕಲ್ಪಿಸುತ್ತಿದೆ. ಕಾರ್ಯಕ್ರಮದಲ್ಲಿ ವೈಯಕ್ತಿಕ ಸಮಾಲೋಚನೆ, ವೀಸಾ ಬಗ್ಗೆ ಮಾಹಿತಿ, ಅರ್ಜಿ ಸಲ್ಲಿಕೆ ಮತ್ತು ಟ್ರ್ಯಾಕಿಂಗ್, ಅರ್ಜಿ ಸಲ್ಲಿಕೆ ಮತ್ತು ದಾಖಲಾತಿ ಬಗ್ಗೆ ವಿವರಣೆ, ಹಣಕಾಸು ವ್ಯವಸ್ಥೆ ಮತ್ತು ಆರೋಗ್ಯ ವಿಮೆ ಕುರಿತು ಮಾಹಿತಿ ಸಹಿತ ವಿದೇಶಿ ಭಾಷೆಯ ಪ್ರಾವೀಣ್ಯತೆಯ ಮೌಲ್ಯಮಾಪನ ಸೌಲಭ್ಯವು ಲಭ್ಯವಿದೆ.

ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಆಸಕ್ತರು https://studyabroad.ksdckarnataka.com ಮೂಲಕ ಅರ್ಜಿ ಸಲ್ಲಿಸಬಹುದು. ದೂ.ಸಂ 7338674791, 7338674794, 7338674798, 7338674792 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News