×
Ad

ಸೆ.17ರಂದು ರೋಶನಿ ನಿಲಯದಲ್ಲಿ ರಾಷ್ಟ್ರಮಟ್ಟದ ಅಂತರ್‌ಕಾಲೇಜು ಸ್ಪರ್ಧೆ

Update: 2025-09-15 22:32 IST

ಮಂಗಳೂರು, ಸೆ. 15: ಸ್ಕೂಲ್ ಆಪ್ ಸೋಶಿಯಲ್ ವರ್ಕ್ , ರೋಶನಿ ನಿಲಯದಲ್ಲಿ ಸೆ.17ರಂದು ರಾಷ್ಟ್ರಮಟ್ಟದ ಅಂತರ್ ಕಾಲೇಜು ವಿದ್ಯಾರ್ಥಿಗಳ ಸ್ಪರ್ಧಾಕೂಟವನ್ನು ಆಯೋಜಿಸಲಾಗಿದೆ.

‘ಲೆಜೆಂಡ್ಸ್ ರೀಬಾರ್ನ್’ ಶೀರ್ಷಿಕೆ ಅಡಿಯಲ್ಲಿ ಆಯೋಜಿಸಲಾಗಿರುವ ಈ ಸ್ಪರ್ಧೆಯು 25ನೇ ವರ್ಷದ ಈ ಸ್ಪರ್ಧೆ ಯಾಗಿದೆ. 2001ರಲ್ಲಿ ಆರಂಭಿಸಲಾದ ಈ ಸ್ಪರ್ಧಾಕೂಟವು ಅತ್ಯಂತ ಪ್ರಮುಖ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸ್ಪರ್ಧಾಕೂಟವಾಗಿ ಬೆಳೆದು ಬಂದಿದೆ ಹಾಗೂ ಇದು ಅನೇಕ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಈ ವರ್ಷದ ಎಕ್ಸ್ಪ್ರೆಶನ್ 2025ರ ವಿಶೇಷವೆಂದರೆ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರ ಜನ್ಮ ಶತಮಾನೋತ್ಸವ ಆಗಿದೆ. 8 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧಾ ಕೂಟವನ್ನು ಹಿರಿಯ ಪತ್ರಕರ್ತ ವಾಲ್ಟರ್ ನಂದಳಿಕೆ ಸ್ಪರ್ಧಾ ಕೂಟವನ್ನು ಉದ್ಘಾಟಿಸಲಿರುವರು. ನ್ಯಾಶನಲ್ ಅಲೈಡ್ ಆ್ಯಂಡ್ ಹೆಲ್ತ್ ಕೌನ್ಸಿಲ್‌ನ ರಾಜ್ಯ ಅಧ್ಯಕ್ಷ ಡಾ.ಯು.ಟಿ.ಇಫ್ತಿಕರ್ ಅಲಿ ಮುಖ್ಯ ಅತಿಥಿಯಾಗಿ ಭಾವಹಿಸಲಿ ದ್ದಾರೆ. ಕಾಲೇಜಿನ ಪರೀಕ್ಷಾಂಗದ ನಿಯಂತ್ರಕ ಪ್ರೊ. ಸಿಸಿಲಿಯ ಎಫ್ ಗೋವಿಯಸ್ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು.

ಕಾಲೇಜಿನ ಸ್ನಾತಕ ವಿಭಾಗದ ಡೀನ್ ಪ್ರೊ.ಸ್ಯಾಂಡ್ರಾ ಸುನೀತಾ ಲೋಬೊ ಅಧ್ಯಕ್ಷತೆಯಲ್ಲಿ ಸಭೆ ಸಮಾರೋಪದಲ್ಲಿ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಸ್ವರಾಜ್ ಶೆಟ್ಟಿ , ಗ್ಲಿಟ್ಸ್ ಎಂಟರ್ಟೈನ್ಮೆಂಟ್‌ನ ಮಾಲಕ ತುಷಾರ್ ಸುರೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News