×
Ad

ಜೂ.18: ಉಸ್ತುವಾರಿ ಸಚಿವರು ದ.ಕ. ಜಿಲ್ಲೆಗೆ ಭೇಟಿ

Update: 2025-06-16 17:44 IST

ಮಂಗಳೂರು, ಜೂ.16:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಜೂ.18ರಂದು ದ.ಕ. ಜಿಲ್ಲೆಗೆ ಆಗಮಿಸಲಿದ್ದಾರೆ.

ಬೆಳಗ್ಗೆ 10:05ಕ್ಕೆ ಬೆಂಗಳೂರಿನಿಂದ ವಿಮಾನದಲ್ಲಿ ಹೊರಟು 11: 15ಕ್ಕೆ ಮಂಗಳೂರು ತಲುಪಲಿದ್ದಾರೆ. ಬಳಿಕ ಪುತ್ತೂರಿಗೆ ತೆರಳಲಿರುವ ಅವರು ಪುತ್ತೂರಿನಲ್ಲಿ 12:30ಕ್ಕೆ ಸರಕು ಮತ್ತು ಸೇವಾ ತೆರಿಗೆಯ ಲೆಕ್ಕಪರಿಶೋಧನಾ ಕಚೇರಿ ಮತ್ತು ಜಾರಿ ವಿಭಾಗದ ಹೊಸ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿರುವರು.ಬಳಿಕ ಸುಳ್ಯಕ್ಕೆ ತೆರಳಲಿರುವರು.

ಅಪರಾಹ್ನ 2:30ಕ್ಕೆ ಸುಳ್ಯ ತಾಲೂಕು ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗದ ನೂತನ ಕಚೇರಿ ಉದ್ಘಾಟನೆ, 3 ಗಂಟೆಗೆ ಸುಳ್ಯ ತಾಲೂಕು ಆಸ್ಪತ್ರೆಯ ಬ್ಲಾಕ್ ಪಬ್ಲಿಕ್ ಹೆಲ್ತ್ ಲ್ಯಾಬ್(ಬಿಪಿಎಚ್‌ಎಲ್) ಮತ್ತು ನೂತನ ಶವಾಗಾರ ಉದ್ಘಾಟನೆ , 3:30ಕ್ಕೆ ಅಲೆಟ್ಟಿ ಗ್ರಾಮದ ಅರಂಬೂರು ಎಂಬಲ್ಲಿ ವಲಯ ಅರಣ್ಯಾಧಿ ಕಾರಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಂಗಳೂರಿಗೆ ವಾಪಸಾಗಲಿವರು.

5:30ಕ್ಕೆ ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಂಗಾರು ಮಳೆಯ ಹಾನಿ ಮತ್ತು ಮುನ್ನಚ್ಚರಿಕೆ ಕ್ರಮದ ಬಗ್ಗೆ ಚರ್ಚಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ರಾತ್ರಿ 9:45ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ನಿರ್ಗಮಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News