×
Ad

ಡಿ.2: ಸೌಹಾರ್ದ ಗಾನ ಕಾರ್ಯಕ್ರಮ

Update: 2023-12-01 21:37 IST

ಮಂಗಳೂರು, ಡಿ.1: ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ವತಿಯಿಂದ ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆ - ಕರ್ನಾಟಕ ಇದರ ಅಂಗವಾಗಿ (ಪತ್ತಪ್ಪೆಜೋಕುಲು ಒಂಜಿ ಮಟ್ಟೆಲ್ಡ್-ಹತ್ತು ತಾಯಂದಿರ ಮಕ್ಕಳು ಒಂದು ಮಡಿಲಲ್ಲಿ) ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುತ್ತಿರುವ ‘ಸೌಹಾರ್ದ ಗಾನ’ ಕಾರ್ಯಕ್ರಮವು ಡಿ.2ರಂದು ಸಂಜೆ 6ಕ್ಕೆ ತಣ್ಣೀರುಬಾವಿ ಕಡಲತೀರದಲ್ಲಿ ನಡೆಯಲಿದೆ.

ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ಉದ್ಘಾಟಿಸಲಿದ್ದಾರೆ.

ಅತಿಥಿಗಳಾಗಿ ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು, ಪತ್ರಕರ್ತ ಡಾ. ಸಿದ್ದನಗೌಡ ಪಾಟೀಲ್, ಅಕ್ಕಮಹಾದೇವಿ ಮಹಿಳಾ ವಿವಿಯ ಮಾಜಿ ಕುಲಪತಿ ಡಾ. ಸಬೀಹಾ ಭೂಮಿಗೌಡ, ಅಬ್ದುಲ್ ಖಲಾಮ್ ತೀರ್ಥಹಳ್ಳಿ, ಡಾ. ಝಕೀರ್ ಯೂಸುಫ್ ಹುಸೈನ್ ಸುರತ್ಕಲ್ , ಅಯಾಝ್ ಕೈಕಂಬ, ಬಶೀರ್ ಬೈಕಂಪಾಡಿ, ಕೆ.ಪಿ.ಪಣಿಕರ್, ಮುಹಮ್ಮದ್ ಇಕ್ಬಾಲ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News