ಫೆ.20: ಎಸ್ಕೆಎಸೆಸ್ಸೆಫ್ ಗ್ರಾಮಚಾವಡಿ ಶಾಖೆಯ ವಾರ್ಷಿಕ ಕಾರ್ಯಕ್ರಮ
Update: 2025-02-19 18:04 IST
ಕೊಣಾಜೆ: ಎಸ್ಕೆಎಸೆಸ್ಸೆಫ್ ಗ್ರಾಮಚಾವಡಿ ಶಾಖೆಯ ೧೩ನೇ ವಾರ್ಷಿಕದ ಪ್ರಯುಕ್ತ ಫೆ.20ರಂದು ಮಗ್ರಿಬ್ ನಮಾಝಿನ ಬಳಿಕ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಏಕದಿನ ಮತ ಪ್ರಭಾಷಣ ಕಾರ್ಯಕ್ರಮ ನಡೆಯಲಿದೆ.
ಸಯ್ಯಿದ್ ಇಬ್ರಾಹಿಂ ಬಾತಿಷ್ ತಂಙಳ್ ಆನೆಕಲ್ಲು, ಅಬ್ದುಲ್ ಗಫೂರ್ ಮುಸ್ಲಿಯಾರ್ ಕೀಚೇರಿ, ಅಬ್ದುಲ್ ರಹ್ಮಾನ್ ಅರ್ಶದಿ, ಕೆ. ಎಂ. ಅಬ್ದುಲ್ ಮಜೀದ್, ಕೆ. ಇಸ್ಮಾಯಿಲ್ ಮತ್ತಿತರರು ಭಾಗವಹಿಸಲಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಎಸ್ಕೆಎಸೆಸ್ಸೆಫ್ ದ.ಕ. ಜಿಲ್ಲಾ ವೆಸ್ಟ್ ಸಮಿತಿಯ ಉಪಾಧ್ಯಕ್ಷ ಉಮರುಲ್ ಫಾರೂಕ್ ದಾರಿಮಿ ಗ್ರಾಮಚಾವಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.