×
Ad

ಫೆ.21, 22ರಂದು ದ.ಕ ಜಿಲ್ಲಾ ಸಾಹಿತ್ಯ ಸಮ್ಮೇಳನ: 14 ಸಾಧಕರಿಗೆ ಗೌರವ ಸನ್ಮಾನ

Update: 2025-02-16 18:08 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯ ಮಂಗಳ ಸಭಾಂಗಣದಲ್ಲಿ ಫೆ. 21 ಮತ್ತು 22 ರಂದು ನಡೆಸುವ 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಹಿರಿಯ ಸಾಹಿತಿಗಳಾದ ಡಾ. ಪ್ರಭಾಕರ ಶಿಶಿಲ ಇವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ.

ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಾಡಿನ 13 ಮಂದಿಯನ್ನು ಮತ್ತು ಒಂದು ಸಂಸ್ಥೆಯನ್ನು ಗುರುತಿಸಿ ಗೌರವ ಸನ್ಮಾನ ಮಾಡಲಾಗುವುದು.

ಉಡುಪಿಯ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಪಾವೂರು, ಕಾದಂಬರಿಕಾರ ಡಾ. ಪ್ರಭಾಕರ ನೀರುಮಾರ್ಗ, ಮಂಗಳೂರು; ಸಾಮಾಜಿಕ ಮುಖಂಡ ವೆಂಕಪ್ಪ ಕಾಜವ ಮಿತ್ತಕೋಡಿ, ಮುಡಿಪು; ಕಲಾವಿದ ಎಂ.ಜಿ.ಕಜೆ, ಸುಳ್ಯ; ಲೇಖಕ ಪರಮಾನಂದ ಸಾಲಿಯಾನ್, ಮುಲ್ಕಿ; ಪತ್ರಕರ್ತ ಧನಂಜಯ ಮೂಡಬಿದಿರೆ; ವರ್ಣಚಿತ್ರ ಕಲಾವಿದ ಮೋನಪ್ಪ, ಪುತ್ತೂರು; ಶಿಕ್ಷಕರು ಮತ್ತು ಕ್ರೀಡಾಪಟು ಪ್ರೇಮಾಗೌಡ, ಕಡಬ; ಕರಾವಳಿಯ ಪಾರಂಪರಿಕ ವಸ್ತು ಸಂಗ್ರಹಕಾರ ಶಶಿಕುಮಾರ್ ಭಟ್ ಪಡಾರು, ವಿಟ್ಲ; ಜಲ ಸಂವರ್ಧನ ತಜ್ಞ ಡಾ. ಜೋಸೆಫ್ ಎನ್ ಎಮ್, ಬೆಳ್ತಂಗಡಿ; ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ ತೊಕ್ಕೊಟ್ಟು, ಮಂಗಳೂರು; ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ. ಸಬಿತ ಕೊರಗ, ಕೊಣಾಜೆ ಇವರನ್ನು ಸನ್ಮಾನಿಸಲಾಗುವುದು.

ಗಡಿನಾಡಿನಲ್ಲಿ ಕನ್ನಡ ವಿಸ್ತರಣೆಯ ಸೇವೆಗಾಗಿ ನಿರಂಜನರ ಕಾದಂಬರಿಗಳ ಮಲಯಾಳ ಅನುವಾದಕರಾಗಿರುವ ಪಯ್ಯನ್ನೂರು ಕುಂಞ್ಞಿರಾಮನ್ ಮಾಸ್ತರ್ ಮತ್ತು ಸಂಸ್ಥೆಗಳಿಗೆ ನೀಡುವ ಗೌರವಕ್ಕೆ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಇವರನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾಗುವುದಾಗಿ ದ.ಕ.ಜಿಲ್ಲಾ ಕ.ಸಾ.ಪ ದ ಅಧ್ಯಕ್ಷರಾಗಿರುವ ಡಾ. ಎಂ.ಪಿ.ಶ್ರೀನಾಥ, ಸಂಯೋಜನ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಕುಂಬ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News