ಫೆ.22ರಂದು ‘ಮಾಯಿದ ಮಹಾಕೂಟ’
ಮಂಗಳೂರು: ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ವತಿಯಿಂದ ‘ಮಾಯಿದ ಮಹಾಕೂಟ’ ಫೆ. 22ರಂದು ಸಂಜೆ 3.30ಕ್ಕೆ ಉರ್ವಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ತಿಳಿಸಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಸ್ಪೀಕರ್ ಯು.ಟಿ. ಖಾದರ್ ಸಮಾಜ ಸೇವಕ ಲೆಫ್ಟಿನೆಂಟ್ ಜನರಲ್ ಅಂಬಾಸಿಡರ್ ಡಾ. ಡೇವಿಡ್ ಫ್ರ್ಯಾಂಕ್ ಫೆರ್ನಾಂಡಿಸ್, ಆಲೀಸ್ ಫೆರ್ನಾಂಡಿಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸಮಾರಂಭದಲ್ಲಿ ತುಳು ಭಾಷೆ ಸಂಸ್ಕೃತಿಗೆ ಶ್ರಮಿಸಿದ ವಕೀಲ ಅಡೂರ್ ಉಮೇಶ್ ನಾಕ್, ಪುಣೆಯ ಮಾಜಿ ಕಾರ್ಪೋರೇಟರ್ ಜಯಶೆಟ್ಟಿ, ತುಳು ಸಂಘಟಕ ಯು.ಜಿ. ದೇವಾಡಿಗ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕೆ. ಸೇಸಪ್ಪ ರೈ, ಯಕ್ಷಗಾನ ಹಿರಿಯ ಕಲಾವಿದ ಕೆ.ಎಚ್. ದಾಸಪ್ಪ ರೈ ‘ಪೆರ್ಮೆದ ಸಾಧಕೆರ್’ ಎಂದು ಸನ್ಮಾನಿಸಲಾಗುವುದು. ಸಂಜೆ 4ರಿಂದ ದಿನೇಶ್ ಕೊಡಪದವು ಕೂಟದಿಂದ ಯಕ್ಷ ತೆಲಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ಒಕ್ಕೂಟ ಉಪಾಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಯೋಗೀಶ್ ಶೆಟ್ಟಿ ಜಪ್ಪು, ಪ್ರಧಾನ ಕಾರ್ಯದರ್ಶಿ ಪಿ.ಎ. ಪೂಜಾರಿ, ಕೋಶಾಧಿಕಾರಿ ವಿಜಯಲಕ್ಷ್ಮಿ ಬಿ. ಶೆಟ್ಟಿ, ಕಾರ್ಯಕ್ರಮದ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ, ಒಕ್ಕೂಟ ಮಾಧ್ಯಮ ವಕ್ತಾರ ಮುಲ್ಕಿ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.