ಸೆ.22: ಕುದ್ರೋಳಿ ದಸರಾದಲ್ಲಿ ಎಂ.ಫ್ರೆಂಡ್ಸ್‌ಗೆ "ಸೇವಾ ಸಿರಿ - 2025" ಪ್ರಶಸ್ತಿ ಪ್ರದಾನ
Update: 2025-09-21 23:11 IST
ಮಂಗಳೂರು: ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟಿಗೆ ಕುದ್ರೋಳಿ ದಸರಾ ಕಾರ್ಯಕ್ರಮದಲ್ಲಿ ಸೆ. 22ರಂದು ಸಂಜೆ 6:30ಕ್ಕೆ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ "ಸೇವಾ ಸಿರಿ-2025" ಪ್ರಶಸ್ತಿ ನೀಡಿ ಗೌರವಿಸ ಲಾಗುವುದು ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜಯರಾಜ್ ಎಚ್. ಸೋಮಸುಂದರಮ್ ಹಾಗೂ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ತಿಳಿಸಿದ್ದಾರೆ.
ಎಂ.ಫ್ರೆಂಡ್ಸ್ ಸಂಸ್ಥೆ ಸಮಾಜಮುಖಿ ಚಟುವಟಿಕೆಗಳ ಮೂಲಕ ಅನೇಕ ಜನರ ಬದುಕಿಗೆ ಸ್ಪೂರ್ತಿ, ಬೆಂಬಲ ಮತ್ತು ಬೆಳಕು ತುಂಬಿದ ಮಹತ್ತರ ಸೇವೆ ಸಲ್ಲಿಸುತ್ತಿರುವುದನ್ನು ಪರಿಗಣಿಸಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಈ ಪ್ರಶಸ್ತಿ ಯನ್ನು ನೀಡುತ್ತಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.