ಸೆ.23ರಿಂದ ತಾಜುಲ್ ಉಲಮಾ 12ನೇ ಉರೂಸ್
ಮಂಗಳೂರು: ಉಳ್ಳಾಲ ತಂಙಳ್ ಎಂದೇ ಖ್ಯಾತರಾಗಿದ್ದ ಶೈಖುನಾ ತಾಜುಲ್ ಉಲಮಾ ಸಯ್ಯದ್ ಅಬ್ದುರ‌್ರಹ್ಮಾನ್ ಅಲ್ ಬುಖಾರಿಯವರ 12ನೇ ಉರೂಸ್ ಕಾರ್ಯಕ್ರಮ ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕುಳಂನಲ್ಲಿ ಸೆ. 23ರಿಂದ 25ರವರೆಗೆ ನಡೆಯಲಿದೆ.
ಸುದ್ದಿಗೋಷ್ಟಿಯಲ್ಲಿ ಶನಿವಾರ ಈ ಬಗ್ಗೆ ಮಾಹಿತಿ ನೀಡಿದ ಮದನೀಸ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಬಶೀರ್ ಮದನಿ ಕೂಳೂರು, ಸೆ. 25ರಂದು ಬೆಳಗ್ಗೆ 10 ಗಂಟೆಗೆ ಮದನಿ ಸಂಗಮ ಹಾಗೂ ಸಂಜೆ 5 ಗಂಟೆಗೆ ಸಮಾರೋಪ ಸಮ್ಮೇಳನ ನಡೆಯಲಿದೆ ಎಂದರು.
ಕೇರಳ, ಕರ್ನಾಟಕ, ತಮಿಳುನಾಡು ಮೊದಲಾದ ರಾಜ್ಯಗಳಿಂದ ಸಹಸ್ರಾರು ಮಂದಿ ಭಾಗವಹಿಸಲಿದ್ದು, ತಾಜುಲ್ ಉಲಮಾರ ಶಿಷ್ಯ ಸಂಘಟನೆ ಮದನೀಸ್ ಅಸೋಸಿಯೇಶನ ಮತ್ತು ಉರೂಸ್ ಸ್ವಾಗತ ಸಮಿತಿ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್, ಇ. ಸುಲೇಮಾನ್ ಉಸ್ತಾದ್, ಸಯ್ಯದ್ ಅಲಿ ಬಾಫಖಿ ತಂಳ್, ಕಡಲುಂಡಿ ಸಯ್ಯದ್ ಖಲೀಲ್ ತಂಳ್, ಸಯ್ಯದ್ ಇಂಬಿಚ್ಚಿಕೋಯ ತಂಳ್, ಚೆರುಕುಂಞಿ ತಂಳಂ, ಕುಂಬೋಳ್ ಆಟಕೋಯ ತಂಳ್, ಕೋಟೂರು ಉಸ್ತಾದ್, ಶೈಖುನಾ ಮಾಣಿ ಉಸ್ತಾದ್, ಪೇರೋಡ್ ಉಸ್ತಾದ್, ಅಡ್ವಕೇಟ್ ಚುಳ್ಳಿಕ್ಕೋಡ್ ಹುಸೇನ್ ಸಖಾಫಿ, ಡಾ. ಅಬ್ದುಲ್ ಹಕೀಂ ಅಝ್‌ಹರಿ, ಡಾ. ಫಾರೂಕ್ ನಈಮಿ, ಕೂಟಂಬಾರ ದಾರಿಮಿ, ಸ್ಪೀಕರ್ ಯು.ಟಿ.ಖಾದರ್, ಯೆನೆಪೋಯ ಅಬ್ದುಲ್ಲ ಕುಂಞಿ, ಇನಾಯತ್, ಯು.ಟಿ. ಇಫ್ತಿಕಾರ್ ಅಲಿ ಮೊದಲಾದವರು ಭಾಗವಹಿಸಲಿದ್ದಾರೆ. ಉರೂಸ್ ವೇಳೆ ಸುಮಾರು 2 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದವರು ಹೇಳಿದರು.
ಗೋಷ್ಟಿಯಲ್ಲಿ ಉರೂಸ್ ಸ್ವಾಗತ ಸಮಿತಿಯ ಸಂಯೋಜಕ ಖಾಲಿದ್ ಹಾಜಿ ಭಟ್ಕಳ, ಮದನೀಸ್ ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಮದನಿ ಬಂಡಾಡಿ, ಉರೂಸ್ ಸಮಿತಿ ಸದಸ್ಯ ಕಲಂದರ್ ಕಾವೂರು ಉಪಸ್ಥಿತರಿದ್ದರು.