ಜು.25: ದ.ಕ.ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಬುಧವಾರ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಉಳಿದಂತೆ ದಿನಪೂರ್ತಿ ಬಿಸಿಲು ಮಿಶ್ರಿತ ಮೋಡ ಕವಿದ ವಾತಾವರಣವಿತ್ತು. ಜು.25ರಂದು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಉಪ್ಪಿನಂಗಡಿಯ ನೇತ್ರಾವತಿ ಮತ್ತು ಕುಮಾರಧಾರ ನದಿಯು 27.3 ಮೀ. ಹಾಗೂ ಬಂಟ್ವಾಳದ ನೇತ್ರಾವತಿ ನದಿ ಮಟ್ಟ 8.5 ಮೀ.ಗಳಲ್ಲಿ ಹರಿಯುತ್ತಿತ್ತು. ಜಿಲ್ಲೆಗೆ ಗಂಟೆಗೆ 38 ಕಿ.ಮೀ ನಿಂದ 48 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ.
ಬುಧವಾರ ಬೆಳಗ್ಗಿನವರೆಗೆ ಬೆಳ್ತಂಗಡಿಯಲ್ಲಿ 44 ಮಿ.ಮೀ ಗರಿಷ್ಠ ಮಳೆ ದಾಖಲಾಗಿದೆ. ಜಿಲ್ಲೆಯ ಗರಿಷ್ಟ ತಾಪಮಾನ 29.7 ಡಿಗ್ರಿ ಸೆ. ಮತ್ತು ಕನಿಷ್ಟ 23.1 ಡಿಗ್ರಿ ಸೆ.ದಾಖಲಾಗಿದೆ. ಜಿಲ್ಲೆಯಲ್ಲಿ ದಿನದ ಸರಾಸರಿ ಮಳೆ 37.4 ಮಿ.ಮೀ.ದಾಖಲಾಗಿದೆ.
ಪುತ್ತೂರಲ್ಲಿ ಗರಿಷ್ಠ ೪೩.೮ ಮಿ.ಮೀ, ಬಂಟ್ವಾಳದಲ್ಲಿ ೩೮.೨ ಮಿ.ಮೀ, ಮಂಗಳೂರಿನಲ್ಲಿ ೩೨.೧ ಮಿ.ಮೀ, ಸುಳ್ಯದಲ್ಲಿ ೨೭.೮ ಮಿ.ಮೀ, ಮೂಡುಬಿದಿರೆಯಲ್ಲಿ ೪೧.೩ ಮಿ.ಮೀ, ಕಡಬದಲ್ಲಿ ೩೪.೮ ಮಿ.ಮೀ, ಮೂಲ್ಕಿಯಲ್ಲಿ ೩೨.೧ ಮಿ.ಮೀ, ಉಳ್ಳಾಲದಲ್ಲಿ ೩೫.೪ ಮಿ.ಮೀ. ಮಳೆ ದಾಖಲಾಗಿದೆ.