×
Ad

ಅ.27: ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮ್ಮೇಳನ

Update: 2024-10-24 20:22 IST

ಮಂಗಳೂರು, ಅ.24: ಸಿಪಿಎಂ ಪಕ್ಷದ 24ನೇ ಅಖಿಲ ಭಾರತ ಮಹಾ ಅಧಿವೇಶನವು 2025ರ ಎಪ್ರಿಲ್‌ನಲ್ಲಿ ಮಧುರೈನಲ್ಲಿ ಆರು ದಿನಗಳ ಕಾಲ ನಡೆಯಲಿದೆ. ಅದರ ಪೂರ್ವ ಭಾವಿಯಾಗಿ ಎಲ್ಲಾ ಹಂತಗಳ ಸಮ್ಮೇಳನಗಳು ದೇಶಾದ್ಯಂತ ಆರಂಭ ಗೊಂಡಿವೆ. ದ.ಕ. ಜಿಲ್ಲೆಯಲ್ಲಿಯೂ ಸಮ್ಮೇಳನದ ಪ್ರಕ್ರಿಯೆಗಳು ಆರಂಭಗೊಂಡಿದೆ.

ಅದರಂತೆ ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮ್ಮೇಳನವು ಅ.27ರಂದು ಕೊಟ್ಟಾರ ಚೌಕಿಯ ವಿ.ಎಸ್.ಕೆ ಸಭಾಂಗಣ ದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 9:30ಕ್ಕೆ ಧ್ವಜಾರೋಹಣದೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಸಂಜೆ 4ಕ್ಕೆ ಸಭಾಂಗಣದ ವಠಾರದಿಂದ ಉರ್ವಸ್ಟೋರ್ ಜಂಕ್ಷನ್‌ವರೆಗೆ ಮೆರವಣಿಗೆ ಹಾಗೂ ಬಹಿರಂಗ ಸಭೆ ನಡೆಯಲಿದೆ. ಸಿಪಿಎಂ ಕರ್ನಾಟಕ ರಾಜ್ಯ ಮುಖಂಡ ಕೆ. ಮಹಾಂತೇಶ್ ಪ್ರಮುಖ ಭಾಷಣ ಮಾಡಲಿದ್ದಾರೆ ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News