×
Ad

ಎ.27ರಂದು ಎಕ್ಸೆಲ್ ಎಂಆರ್‌ಐ ಡಯಾಗ್ನೊಸ್ಟಿಕ್ ಕೇಂದ್ರ ಉದ್ಘಾಟನೆ

Update: 2025-04-25 19:55 IST

ಮಂಗಳೂರು, ಎ.25: ನಗರದ ನುರಿತ 32 ವೈದ್ಯರ ತಂಡವು ಸುಸಜ್ಜಿತ ಎಂಆರ್‌ಐ ಸೌಲಭ್ಯದಿಂದ ಕೂಡಿದ ಎಕ್ಸೆಲ್ ಎಂಆರ್‌ಐ ಡಯಾಗ್ನೊಸ್ಟಿಕ್ ಕೇಂದ್ರವನ್ನು ಆರಂಭಿಸುತ್ತಿದ್ದು, ಎ.27ರಂದು 9ಕ್ಕೆ ಉದ್ಘಾಟನೆ ನಡೆಯಲಿದೆ ಎಂದು ಡಾ. ಜೋ ವರ್ಗೀಸ್ ತಿಳಿಸಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐ ತಂತ್ರಜ್ಞಾನದಿಂದ ಕೂಡಿದ ಎಂಆರ್‌ಐ ಯಂತ್ರಗಳು ಇಲ್ಲಿ ಲಭ್ಯವಿದ್ದು, ಹಾಲೆಂಡ್‌ನಿಂದ ತರಿಸಲಾಗಿದೆ. ಯಾವುದೇ ರೀತಿಯ ದುಗುಡ, ಆತಂಕವಿಲ್ಲದೆ ರೋಗಿಗಳು ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಪೂರಕವಾದ ಯಂತ್ರ ಇದಾಗಿದ್ದು, ಇದರ ಚಿತ್ರಣಗಳು ಅತ್ಯಂತ ಸ್ಪಷ್ಟವಾಗಿರಲಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವೈದ್ಯರಾದ ಡಾ.ಆಲಂ ನವಾಝ್, ಹೆರಾಲ್ಡ್ ಮಸ್ಕರೇನಸ್, ಡಾ.ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News