×
Ad

ಉಳ್ಳಾಲ | ಸೈಯದ್ ಮದನಿ ಉರ್ದು ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Update: 2026-01-26 15:19 IST

ಉಳ್ಳಾಲ : ಸೈಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಯದ್ ಮದನಿ ಪ್ರೌಢಶಾಲೆ ಹಳೆಕೋಟೆಯಲ್ಲಿ ಭಾರತದ 77ನೆಯ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಅಲ್ತಾಫ್ ಯು ಎಚ್. ಧ್ವಜಾರೋಹಣ ಗೈದರು. ಸದಸ್ಯ ಕರೀಮ್ ಯು ಹೆಚ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಕೆ ಎಂ ಕೆ ಮಂಜನಾಡಿ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮಹತ್ವದ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರಾದ ಸಪ್ನ, ಹಸೀನ್ ತಾಜ್, ಬಬಿತಾ ಸೆಲಿನ್ ಡಿಸೋಜಾ, ವೀಣಾ, ರಮ್ಲಾ ಬಾನು , ಶಕೀಲಾ , ಸುಮನ,ಕುಮಾರಿ ,ಅರ್ಪಿತಾ ರೈ, ಶಶಿಕಲಾ, ವಿದ್ಯಾ ರಾವ್ , ಸೌಮ್ಯ , ಅಸ್ಮ, ಕುಮಾರಿ ಮೋನಿಷಾ, ಸುಮಾ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News