ಮಂಗಳೂರು | ಮರ್ಝೂಖೀಸ್ ಎಸೋಶಿಯೇಶನ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ
ಇಕ್ಬಾಲ್ ಮರ್ಝೂಖಿ ಅಸ್ಸಖಾಫಿ ಪರಪ್ಪು ನೂತನ ಅಧ್ಯಕ್ಷ
ಮಂಗಳೂರು: ಮಂಜನಾಡಿಯ ಪ್ರಸಿದ್ಧ ಧಾರ್ಮಿಕ ಹಾಗೂ ಲೌಕಿಕ ವಿದ್ಯಾಸಂಸ್ಥೆಯಾದ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಹಳೆ ವಿದ್ಯಾರ್ಥಿ ಸಂಘಟನೆ *‘ಮರ್ಝೂಖೀಸ್ ಎಸೋಶಿಯೇಶನ್’*ನ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.
ಈ ವೇಳೆ ಸಂಘಟನೆಯ ನೂತನ ಅಧ್ಯಕ್ಷರಾಗಿ ಇಕ್ಬಾಲ್ ಮರ್ಝೂಖಿ ಅಸ್ಸಖಾಫಿ (ಪರಪ್ಪು) ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಸಯ್ಯದ್ ಮುಹಮ್ಮದ್ ಶಾಹಿಲ್ ಮರ್ಝೂಖಿ (ಮಿತ್ತಬೈಲ್) ಹಾಗೂ ಕೋಶಾಧಿಕಾರಿಯಾಗಿ ಶಫೀಕ್ ಮರ್ಝೂಖಿ (ಬೊಲ್ಮಾರ್) ಅವರು ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಮರ್ಝೂಖಿ ಅಲ್ ಅಹ್ಸನಿ (ವಳಾಲು) ಅವರನ್ನು ನೇಮಕ ಮಾಡಲಾಯಿತು.
ಕಾರ್ಯದರ್ಶಿಗಳಾಗಿ ಅನ್ವರ್ ಮರ್ಝೂಖಿ ಅಸ್ಸಖಾಫಿ ಜೊಕಟ್ಟೆ, ಅನೀಸ್ ಮರ್ಝೂಖಿ ಅಲ್ ಅಫ್ಲಲಿ ಸುರತ್ಕಲ್, ಲಿಬಾನ್ ಮರ್ಝೂಖಿ ರಬ್ಬಾನಿ ಕೆ.ಸಿ ರೋಡ್, ಶರೀಫ್ ಮರ್ಝೂಖಿ ವಳಾಲು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ನಾಸಿರ್ ಮರ್ಝೂಖಿ ಬಾಲಮುರಿ, ಯೂನುಸ್ ಮರ್ಝೂಖಿ ಅಸ್ಸಖಾಫಿ ಎರುಮಾಡ್, ಜುನೈದ್ ಮರ್ಝೂಖಿ ಇರಾ, ಅಡ್ವಕೇಟ್ ನೌಫಲ್ ಮರ್ಝೂಖಿ ರಬ್ಬಾನಿ ಮಲಾರ್, ಅಡ್ವಕೇಟ್ ಕಬೀರ್ ಮರ್ಝೂಖಿ ರಬ್ಬಾನಿ ಕಿಲ್ಲೂರು ಸೇರಿದಂತೆ ಇತರ 11 ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಗಿದೆ.
ಅಲ್ ಮದೀನಾ ಸಂಸ್ಥೆಯ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ನೂತನ ಸಮಿತಿಯು ಮುಂದಿನ ವರ್ಷಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.